ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ: ಕಿಶೋರ್ ಕುಮಾರ್ ಆಚಾರ್ಯ ಹೇಳಿಕೆ

Btw_Cultural education
Published on

ಬಂಟ್ವಾಳ: ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣವಾಗುತ್ತಿರುವ ಈ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ ಎಂದು ಜೆಸಿಐ ಬಂಟ್ವಾಳದ ಕಾರ್ಯದರ್ಶಿ ಕಿಶೋರ್ ಕುಮಾರ್ ಆಚಾರ್ಯ ಹೇಳಿದರು.

ಶುಕ್ರವಾರ ಬಿ.ಸಿ.ರೋಡ್ ಅಜ್ಜಿಬೆಟ್ಟುವಿನ ಅಕ್ಕಮಹಾದೇವಿ ಶಿಶುಮಂದಿರದ 15ನೇ ವಾರ್ಷಿಕೋತ್ಸವ, ಪಾದಪೂಜೆ ಹಾಗೂ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಪ್ರತಿಭಾ ದಿನೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆ ಸಹಶಿಕ್ಷಕಿ ಪ್ರೀತಾ ಬೌದ್ದಿಕ್ ನೀಡಿ, ನಮ್ಮಲ್ಲಿ ಏನಾದರೂ ಬದಲಾವಣೆ ಮಾಡಲು ಸಾಧ್ಯವಾದರೆ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಲು ಸಾಧ್ಯವಿದೆ ಎಂದರು.

ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ ಕುಳತ್ತಬೆಟ್ಟು ಮಾತನಾಡಿ, ಹಿಂದು ಸಂಸ್ಕೃತಿ ಉಳಿಸಲು ಇಂತಹ ಕಾರ್ಯಕ್ರಮ ಅಗತ್ಯ. ನಮ್ಮದು ಕತ್ತರಿಸುವ ಸಂಸ್ಕೃತಿಯಲ್ಲ ಬದಲಾಗಿ ಸೂಜಿಯಂತೆ ಜೋಡಿಸುವ ಸಂಸ್ಕೃತಿ ಎಂದರು.

ಪ್ರಗತಿಪರ ಕೃಷಿಕ ಮೋಹನ್ ಅಗ್ರಬೈಲು ದೀಪ ಪ್ರಜ್ವಲಿಸಿದರು. ಕಾರ್ಯಾಧ್ಯಕ್ಷ ಇಂದಿರೇಶ್ ಉಪಸ್ಥಿತರಿದ್ದರು. ಶಿಶು ಮಂದಿರ ಅಧ್ಯಕ್ಷ ಪ್ರಸಾದ್ ಕುಮಾರ್ ಪ್ರಸ್ತಾವನೆಗೈದರು. ವಿದ್ಯಾಶ್ರೀ ಸ್ವಾಗತಿಸಿ, ಅನುಷಾ ಕಿಶೋರ್ ವಂದಿಸಿದರು. ಪವಿತ್ರ ಆಚಾರ್ಯ ನಿರೂಪಿಸಿದರು. ಶಿಕ್ಷಕಿಯರಾದ ದೀಪ್ತಿ, ನೀತಾ ಜಿ., ಕಾರ್ಯದರ್ಶಿ ಲಕ್ಷ್ಮಣ್ ಅಗ್ರಬೈಲು, ಪ್ರಮೋದ್ ಅಗ್ರಬೈಲು, ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net