ಸಾಗುವಳಿ ಪತ್ರಕ್ಕೆ ಒತ್ತಾಯಿಸಿ ಶಾಸಕ ಗಣೇಶ್‌ಗೆ ಮನವಿ

29 KURUGODU 1
ಕುರುಗೋಡಿನ ಮಲ್ಲಪ್ಪನ ಕೆರೆಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡುವ ಕುರಿತು ಅಧಿವೇಶನದಲ್ಲಿ ಚರ್ಚೆಸಬೇಕು ಎಂದು ಒತ್ತಾಯಿಸಿ ರೈತರು ಶಾಸಕ ಜೆಎನ್.ಗಣೇಶ್‌ಗೆ ಮನವಿ ಸಲ್ಲಿಸಿದರು. ಪ್ರಾಂತ ರೈತ ಸಂಫದ ಜಿಲ್ಲಾ ಅಧ್ಯಕ್ಷ ವಿಎಸ್.ಶಿವಶಂಕರ್, ಗಾಳಿ ಬಸವರಾಜ, ಎನ್.ಸೋಮಣ್ಣ, ರಂಗಪ್ಪ, ಷಣ್ಮುಖ, ಕೊಮಾರೆಪ್ಪ ಇದ್ದರು.
Published on

ಕುರುಗೋಡು; ಪಟ್ಟಣದ ಸಿಂಧಿಗೇರಿ ರಸ್ತೆಯಲ್ಲಿರುವ ಮಲ್ಲಪ್ಪನ ಕೆರೆಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜೆ.ಎನ್.ಗಣೇಶ್‌ಗೆ ರೈತರು ಮನವಿ ಸಲ್ಲಿಸಿದರು.

50 ವರ್ಷಗಳಿಂದ ಭೂಮಿಯಲ್ಲಿ 204ರೈತರು ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.

ಮುಂದಿನ ತಿಂಗಳು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ ಕುರಿತು ಚರ್ಚೆನಡೆಸಬೇಕು. ಸಾಗುವಳಿ ಪತ್ರ ನೀಡಿ, ಕೆರೆ ಎನ್ನುವ ಪದವನ್ನು ತೆಗೆದುಹಾಕಿ ಸರ್ಕಾರ ಎಂದು ನಮೂದು ಮಾಡಬೇಕು ಎಂದು ಸಂಘದ ಪದಾಧಿಕಾರಿಗಳು ಹಾಗೂ ರೈತರು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಶಾಸಕ ಜೆಎನ್.ಗಣೇಶ್ ಅಧಿವೇಶನದಲ್ಲಿ ಚರ್ಚೆಸುವುದಾಗಿ ಭರವಸೆ ನೀಡಿದರು. ಮೂಕ ಬಸಪ್ಪ, ಎಚ್.ಸೀನಪ್ಪ, ಎನ್.ಹುಲೆಪ್ಪ, ಎ.ಮಂಜುನಾಥ, ಎಚ್.ಯಂಕಮ್ಮ, ಕಟಿಗೇರು ಬಸವರಾಜ,

ಎಂ.ಆರ್.ರುದ್ರಪ್ಪ, ಎನ್.ರಾಮಣ್ಣ, ಭೀಮಯ್ಯ, ಶಿವರಾಜ್, ಮಂಜುನಾಥ, ಎನ್.ಬಸವರಾಜ, ಟಿ.ಎನ್.ರುದ್ರಪ್ಪ, ಪಕ್ಕೀರಪ್ಪ, ಎಚ್.ರಾಮಪ್ಪ, ಎಚ್.ಬಸವರಾಜ, ಚಿದಾನಂದ, ಜಟಂಗಿ ಹನುಮಂತಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net