

ಇಟಗಿ: ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಮಾಜಿಕ ಚಿಂತನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾಟಕಗಳು ಪರಿಣಾಮಕಾರಿ ಮಾಧ್ಯಮವಾಗಿವೆ. ಹೀಗಾಗಿ ಕಲೆ ಹಾಗೂ ಕಲಾವಿದರನ್ನು ಬೆಳೆಸುವ ಕಾರ್ಯವಾಗಬೇಕು ಎಂದು ಪ್ರಭು ಅಡವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಸುರಪುರ ಕೇರವಾಡದಲ್ಲಿ ಈಚೆಗೆ ಹಮ್ಮಿಕೊಂಡಿದ್ದ (ಹಿಡಕಲ್) ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಸಮಾರೋಪ ಹಾಗೂ ರಾಧಾ ಕೃಷ್ಣ ಪೌರಾಣಿಕ ನಾಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರವೇ (ಶಿವರಾಮೇಗೌಡ ಬಣ) ತಾಲೂಕಾಧ್ಯ ರಾಜು ತಳವಾರ ಮಾತನಾಡಿ, ಕಲೆ, ಸಂಸತಿ ಹಾಗೂ ಪರಂಪರೆ ಉಳಿವಿಗಾಗಿ ಶ್ರೀಮಠ ಸದಾ ಶ್ರಮಿಸುತ್ತಿದೆ ಎಂದರು.
ಗ್ರಾಪಂ ಅಧ್ಯ ಕಲ್ಮೇಶ ಕಾರಕದ, ಪಿಕೆಪಿಎಸ್ ಅಧ್ಯ ವಿಠ್ಠಲ ಹಿಂಡಲಕರ, ರೈತ ಮುಖಂಡ ಕಿಶೋರ ಮಿಠಾರೆ, ಸತಿಗೌಡ ಪಾಟೀಲ, ಯಲ್ಲಪ್ಪ ಅಂಬಿ, ಮಂಜು ಅಂಕಲಗಿ, ಮಹಾವೀರ ಗುಂಡಕಲಿ, ಮೌಳೇಶ ಕುರಗುಂದ, ಕೆಂಪ್ಪಣ್ಣ ತೇಲಿ, ಕಾಡಯ್ಯ ನಿಲಜಗಿ, ಕೆಂಚಪ್ಪ ನಿಟವಿ, ತಿಪ್ಪಣ್ಣ ಶಹಾಬಂದರಿ, ಪರಸಪ್ಪ ಪಾಟೀಲ ಇತರರಿದ್ದರು.