

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಡಗಂಚಿಯಲ್ಲಿ ಅ.೧೧ರಂದು ಬೆಳಗ್ಗೆ ೧೧.೩೦ಕ್ಕೆ ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ) ಉಳಿಸಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲನ ಸಮಿತಿ ಗೌರವ ಅಧಕ್ಷ ಪ್ರೊ.ಆರ್.ಕೆ.ಹುಡಗಿ, ಅಧ್ಯಕ್ಷರಾದ ಡಾ.ಡಿ.ಜಿ.ಸಾಗರ್ ಹೇಳಿದರು.
ಅಂದು ಬೆಳಗ್ಗೆ ೧೧.೩೦ಕ್ಕೆ ಕಡಗಂಚಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯಿಂದ ಜಾಥಾ ಶುರುವಾಗಲಿದ್ದು, ಜಿ¯್ಲೆಯ ವಿವಿಧ ಭಾಗಳಿಂದ ೫ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿz್ದÁರೆ. ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಸಂವಿಧಾನ ಹಾದಿಯಲ್ಲಿ ಸಾಗುವ ಬದಲು ಕೋಮುವಾದಿ ಅಜೆಂಡಾದೊAದಿಗೆ ಆಡಳಿತ ನಡೆಸುತ್ತಿದ್ದಾರೆ. ಕುಲಪತಿಯಾದಾಗಿನಿಂದ ಕ್ಯಾಂಪಸ್‌ನ ಶೈP್ಷÀಣಿಕ ವಾತಾವರಣ ಹಾಳು ಮಾಡಿದ್ದಾರೆ. ಆರ್‌ಎಸ್‌ಎಸ್ ಬೆಂಬಲಿಸುವ ಹಾಗೂ ಹಿಂದುತ್ವ ಚಟುವಟಿಕೆಗಳಿಗೆ ಸಹಕಾರ ನೀಡುವ ಎಬಿವಿಪಿ ಸಂಘಟನೆಗಳ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾಧ್ಯಾಪಕರು ಮಾನ್ಯತೆ ನೀಡುತ್ತಿz್ದÁರೆ. ಉಳಿದವರಿಗೆ ತೊಂದರೆ ಕೊಡುತ್ತಿದ್ದಾರೆಂದು ಜಂಟಿ ಸುದ್ದಿಗೋಷ್ಠಿಯಲ್ಲಿ ದೂರಿದರು.
ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಎಬಿವಿಪಿಗೆ ಸೇರಿಸಲಾಗುತ್ತಿದೆ, ಒಪ್ಪದವರ ಮೇಲೆ ಕೇಸ್ ಹಾಕಲಾಗುತ್ತಿದೆ. ಪ್ರೊ.ಬಟ್ಟು ಸತ್ಯನಾರಾಯಣ ಮತ್ತು ಡಾ.ಬಸವರಾಜ ಡೋಣೂರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲಾಗುತ್ತಿದೆ. ಈ ಹೋರಾಟ ಯಾವುದೇ ಜಾತಿಗೆ ಸೀಮಿತವಲ್ಲ ಎಂದರು.
ಪ್ರಮುಖರಾದ ಮೀನಾಕ್ಷಿ ಬಾಳಿ, ಪ್ರಕಾಶ ಮೂಲಭಾರತಿ, ಮಹಾದೇವ ಧನ್ನಿ, ಎಸ್.ಪಿ.ಸುಳ್ಳದ, ಎಚ್.ಶಂಕರ, ಅಶ್ವಿನಿ ಮದನಕರ್, ಲಕ್ಷಿö್ಮÃಕಾಂತ ಹುಬ್ಬಳ್ಳಿ, ಸುರೇಶ ಹಾದಿಮನಿ, ಹಣಮಂತ ಬೋಧನ, ದತ್ತಾತ್ರೇಯ ಇಕ್ಕಳಕಿ, ಮಂಜು ಸಿ.ಕೆ. ಇತರರಿದ್ದರು.