

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾಹಿತಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪಿಜಿ ಕೋರ್ಸ್ಗಳಿಗೆ ಸಿಯುಇಟಿ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ನೀಡುವ ಪ್ರಕ್ರಿಯೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶುರುವಾಗಿದೆ ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಎಂಎ ಇಂಗ್ಲಿಷ್, ಹಿಂದಿ, ಕನ್ನಡ, ಭಾಷಾಶಾಸ್ತç, ಜಾನಪದ ಮತ್ತು ಬುಡಕಟ್ಟು ಅಧ್ಯಯನ, ಅರ್ಥಶಾಸ್ತç, ಇತಿಹಾಸ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಎಂಕಾA ಎಂಬಿಎ ಮತ್ತು ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆ, ಎಂಎಸ್ಸಿ ಮನೋವಿe್ಞÁನ, ಸಮಾಜಕಾರ್ಯ, ಭೂಗೋಳ, ಭೂವಿe್ಞÁನ, ಗಣಿತ, ಭೌತಶಾಸ್ತç, ರಸಾಯನಶಾಸ್ತç ಮತ್ತು ಜೀವ ವಿe್ಞÁನ, ಎಂಸಿಎ, ಎಂ.ಟೆಕ್ ಪವರ್ ಆ್ಯಂಡ್ ಎನರ್ಜಿ ಇಂಜಿನಿಯರಿAಗ್, ಎಂಟೆಕ್ ಮೈಕ್ರೋವೇವ್ ಇಂಜಿನಿಯರಿAಗ್, ಎಲïಎಲïಎಂ, ಬಿ.ಇಡಿ, ಎಂ.ಇಡಿ, ಎಂಪಿಎ ಹಿಂದುಸ್ಥಾನಿ ಗಾಯನ, ಎಂಪಿಎ ಇನ್‌ಸ್ಟುçಮೆಂಟಲï (ಹಿಂದುಸ್ಥಾನಿ ತಬಲಾ), ಮಾಸ್ಟರ್ ಆಫ್ ವಿಷುವಲï ಆರ್ಟ್ಸ್ (ಪೆಂಟಿAಗ್), ಎಂ.ಕಾA (ಬ್ಯಾಂಕಿAಗ್ ಮತ್ತು ಹಣಕಾಸು ತಂತ್ರe್ಞÁನ) ಕೋರ್ಸ್ಗಳಿಗೆ ಪ್ರವೇಶ ನೀಡಲಾಗುತ್ತಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಯುಇಟಿ ಪರೀಕ್ಷೆ ಮೂಲಕ ಪ್ರವೇಶ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜ.೨ರಂದು ಪ್ರಾರಂಭವಾಗಿದೆ. ಸ್ನಾತಕ (ಯುಜಿ) ಅಂತಿಮ ಸೆಮಿಸ್ಟರ್ ಓದುತ್ತಿರುವ ಮತ್ತು ಈಗಾಗಲೇ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಅರ್ಜಿ ಸಲ್ಲಿಸಲು ಫೆ.೧ ಕೊನೆಯ ದಿನ ಎಂದರು.
ಕAಪ್ಯೂಟರ್ ಆಧಾರಿತ ಪರೀಕ್ಷೆ: ಸಿಯುಇಟಿ (ಪಿಜಿ) ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೋಡ್‌ನಲ್ಲಿ ನಡೆಸಲಾಗುವುದು. ಕ್ರೆಡಿಟ್/ಡೆಬಿಟ್ ಕಾರ್ಡ್/ ನೆಟ್‌ಬ್ಯಾಂಕಿAಗ್/ ಯುಪಿಐ ಮೂಲಕ ಶುಲ್ಕ ಪಾವತಿಗೆ ಫೆ.೨ ಕೊನೇ ದಿನ. ಫೆ.೩ರಿಂದ ೫ರವರೆಗೆ ಅರ್ಜಿಯಲ್ಲಿ ತಿದ್ದುಪಡಿ ಮಾಡಬಹುದು. ಪ್ರವೇಶ ಪತ್ರವನ್ನು ಎನ್‌ಟಿಎ ವೆಬ್‌ಸೈಟ್ ಮೂಲಕ ಪರೀಕ್ಷೆಗಿಂತ ನಾಲ್ಕು ದಿನ ಮೊದಲು ಡೌನ್‌ಲೋಡ್ ಮಾಡಬಹುದು. ಮಾ.೧೩ರಿಂದ ೩೧ರವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಸರಿಯಾದ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ನಂತರ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಭಾಷಾ ಪ್ರಶ್ನೆಪತ್ರಿಕೆ ಹೊರತುಪಡಿಸಿ ಉಳಿದೆಲ್ಲ ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರಲಿವೆ. ಪರೀಕ್ಷೆ, ಪರೀಕ್ಷೆ ವಿಧಾನ, ವೇಳಾಪಟ್ಟಿ, ಅರ್ಹತೆ ಇತರ ಮಾಹಿತಿಗೆ ವಿವಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸಿಯುಇಟಿ (ಪಿಜಿ)-೨೦೨೫ರ ಮಾಹಿತಿ ಬುಲೆಟಿನ್ ಪರಿಶೀಲಿಸಬೇಕು ಎಂದರು.
ವಿವಿ ಕ್ಯಾಂಪಸ್‌ನಲ್ಲಿದ್ದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು. ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್ ಮಾತನಾಡಿದರು. ಪ್ರೊ.ಹನುಮೇಗೌಡ, ಡಾ.ಭರತ್, ಡಾ.ಗಣಪತಿ ಸಿನ್ನೂರ್ ಇತರರಿದ್ದರು.
ವೆಬ್‌ಸೈಟ್‌ನಲ್ಲಿ ಭರ್ತಿ ಮಾಡಿ
ಎನ್‌ಟಿಎ ಫಲಿತಾಂಶ ಪ್ರಕಟಿಸಿದ ನಂತರ ಪ್ರವೇಶಕ್ಕಾಗಿ ನೋಂದಾಯಿಸಲು ವಿವಿಯಿಂದ ಅಭ್ಯರ್ಥಿಗಳಿಗೆ ಕರೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಅರ್ಜಿ ವಿವರಗಳನ್ನು ಸಿಯುಕೆ ವೆಬ್‌ಸೈಟ್‌ನಲ್ಲಿ ಭರ್ತಿ ಮಾಡಬೇಕು. ಸಿಯುಇಟಿ ಫಲಿತಾಂಶ ಪ್ರಕಟಗೊಂಡ ನಂತರ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಬಯಸಿದರೆ ಸಿಯುಕೆ ಪೋರ್ಟಲ್‌ನಲ್ಲಿ ನೋಂದಾಯಿಸುವುದು ಕಡ್ಡಾಯ. ನೋಂದಾಯಿತ ವಿದ್ಯಾರ್ಥಿಗಳಲ್ಲಿ ಸಿಯುಇಟಿ ಅಂಕ ಆಧರಿಸಿ ಅರ್ಹತೆ ಮತ್ತು ಮೀಸಲಾತಿ ಪ್ರಕಾರ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಸಿಯುಕೆ ಮತ್ತು ಎನ್‌ಟಿಎ ವೆಬ್‌ಸೈಟ್ ನಿರಂತರ ವೀಕ್ಷಿಸುತ್ತಿರಬೇಕು.
ಸಹಾಯವಾಣಿಗೆ ಸಂಪರ್ಕಿಸಿ
ಭಾರತದ ಹೊರಗಿನ ೨೭ ಸೇರಿ ೩೧೨ ನಗರಗಳಲ್ಲಿ ಸಿಯುಇಟಿ(ಪಿಜಿ)- ೨೦೨೫ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ ಮತ್ತು ಬಳ್ಳಾರಿ ಹಾಗೂ ರಾಜ್ಯದ ಬೆಳಗಾವಿ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ಉಡುಪಿಯಲ್ಲಿ ಪರೀಕ್ಷೆ ಜರುಗಲಿದೆ. ಅರ್ಜಿ ಸಲ್ಲಿಸಲು ಯಾವುದೇ ಅಭ್ಯರ್ಥಿ ತೊಂದರೆ ಎದುರಿಸಿದರೆ ಸಹಾಯವಾಣಿ ೦೧೧- ೪೦೭೫೯೦೦೦ / ೦೧೧ - ೬೯೨೨೭೭೦೦ಗೆ ಸಂಪರ್ಕಿಸಬಹುದು. ಅಭ್ಯರ್ಥಿಗಳು ಪರೀಕ್ಷೆಗೆ ಸಂಬAಧಿಸಿದ ಇತ್ತೀಚಿನ ಮಾಹಿತಿಗೆ ಎನ್‌ಟಿಎ ವೆಬ್‌ಸೈಟ್‌ನೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಸಂಪೂರ್ಣ ಆನ್‌ಲೈನ್
ಪ್ರವೇಶ ಪ್ರಕ್ರಿಯೆÄ ಸಂಪೂರ್ಣ ಆನ್‌ಲೈನ್ ಇರಲಿದೆ. ಹೀಗಾಗಿ ಅಭ್ಯರ್ಥಿಗಳು ಭವಿಷ್ಯದ ಸಂವಹನಕ್ಕಾಗಿ ಅರ್ಜಿಯಲ್ಲಿ ಸರಿಯಾದ ಇಮೇಲï ಮತ್ತು ಫೋನ್ ನಂಬರ್ ನಮೂದಿಸಬೇಕು. ಎಂಟೆಕ್ ಶೇ.೫೦ ಸೀಟ ಸಿಯುಇಟಿ ಮತ್ತು ಶೇ.೫೦ ಗೇಟ್ ಮೂಲಕ ಭರ್ತಿ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು.
| ಪ್ರೊ.ಬಟ್ಟು ಸತ್ಯನಾರಾಯಣ
ಕುಲಪತಿ, ಸಿಯುಕೆ ಕಲಬುರಗಿ
ಕೈಗಾರಿಕೆಗಳೊಂದಿಗೆ ಒಡಂಬಡಿಕೆ
ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಹೊಸ ಹೊಸ ಕೋರ್ಸ್ ಪ್ರಾರಂಭಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ, ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿದೆ. ಇಂಗ್ಲಿಷ್ ಭಾಷಾ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಕೈಗಾರಿಕೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಎಂಬಿಎ ವಿಭಾಗದಲ್ಲಿ ಕ್ಯಾಂಪಸ್ ಸಂದರ್ಶನ ಮೂಲಕ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ.
| ಪ್ರೊ.ಆರ್.ಆರ್.ಬಿರಾದಾರ್
ಕುಲಸಚಿವ, ಸಿಯುಕೆ ಕಲಬುರಗಿ