ಕೇಂದ್ರೀಯ ವಿವಿ ಆಡಳಿತ ಸೌಧ ಮುಂಭಾಗದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ : ಕ್ಯಾಂಪಸ್ ಗರಂ

IMG-20230904-WA0046
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಇಲ್ಲಿಗೆ ಸಮೀದ ಆಳಂದ ತಾಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ಆವರಣದಲ್ಲಿರುವ ಕಾರ್ಯಸೌಧ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪುತ್ಥಳಿಯನ್ನು  ಸೋಮವಾರ ಬೆಳಗಿನ ಜಾವದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಇದರಿಂದಾಗಿ ಸೋಮವಾರ ದಿನವಿಡಿ ಕ್ಯಾಂಪಸ್ ಸುರಿವ ಮಳೆಯಲ್ಲಿಯೂ ಫುಲ್ ಗರಂ ಆಗಿತ್ತು.
  ಇದರಿಂದಾಗಿ ಆರ್‌ಎಸ್ ಎಸ್  ಮತ್ತು ಸಂಘದ ವಿರೋಧಿಸುವ ವಿಚಾರಧಾರೆಯ ಹಿನ್ನೆಲೆಯವರ ನಡುವಿನ ಮುಸುಕಿನ ಗುದ್ದಾಟ ಮತ್ತಷ್ಟು ಕಾವೇರಿದಂತಾಗಿದೆ. ಇನ್ಮುಂದೆ  ಇನ್ನಷ್ಟು ಪ್ರಖರಗೊಳ್ಳುವುದರ ಜತೆಗೆ ಹೊಸ ವಿವಾದಗಳಿಗೆ ಸಿಯುಕೆ ಹಾಟ್ ಸ್ಪಾಟ್ ಆಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಸೋಮವಾರ ಬೆಳಗಿನ ಜಾವದಲ್ಲಿ ನಾಲ್ವರು ಸಂಶೋಧನಾ ವಿದ್ಯಾರ್ಥಿಗಳು ಆಡಳಿತ ಸೌಧದ ಎದುರು ಕಂಚಿನ ಪುತ್ಥಳಿಯನ್ನು ಖುದ್ದಾಗಿ ಪ್ರತಿಷ್ಠಾಪನೆ ಮಾಡಿದ್ದಾರೆ. ಇದರಿಂದ ಕ್ಯಾಂಪಸ್‌ದಲ್ಲಿ ದಿನವಿಡಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಇದು ಸಿಯುಕೆ ಆಡಳಿತ ಮಂಡಳಿಯವರು ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈ ಸುದ್ದಿ ಕ್ಯಾಂಪಸ್‌ನಲ್ಲಿ ಹರಡುತ್ತಲೇ ವಿದ್ಯಾರ್ಥಿಗಳು ಗುಸುಗುಸು ಮಾತನಾಡುತ್ತಿರುವುದು ಕಂಡು ಬಂದಿತು. ಕುಲಪತಿಗಳು ಹಾಗೂ ಶಿಕ್ಷಕರು ಈ ಕುರಿತು ಚರ್ಚೆ ನಡೆಸಿದ್ದಾರೆ. ಮುಂದೆ ಯಾವ ಹೆಜ್ಜೆ ಇಡಲಿದ್ದಾರೆ ಎಂಬುದು ಕಾದು ನೋಡಬೇಕು.
 ಡಾ.ಅಂಬೇಡ್ಕರ್ ಪುತ್ಥಳಿಯನ್ನು ಪ್ರತಿಷಾಪಿಸಿರುವ ವಿದ್ಯಾರ್ಥಿಗಳು  ವಿಡಿಯೋದಲ್ಲಿ ಮಾತನಾಡಿ, ಸಿಯುಕೆ ವಿಶ್ವ ವಿದ್ಯಾಲಯದ ಸಮಾನ ಮನಸ್ಕರ ಒಕ್ಕೂದಿಂದ ಮೂರ್ತಿ ಕೂರಿಸಲಾಗಿದೆ. ಗ್ರಂಥಾಲಯದಲ್ಲಿ ಸರಸ್ವತಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಅದರ ವಿರೋಧವಾಗಿ ಸಂವಿಧಾನದAತೆ ನಡೆಯುತ್ತಿರುವ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ಮೂಲಕ ಪ್ರಬುದ್ಧ ಹಾಗೂ ವೈಚಾರಿಕ ಪ್ರಜ್ಞೆ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ  ಎಂದು ಹೇಳಿಕೊಂಡಿದ್ದಾರೆ.
ಸಿಯುಕೆ ಸಂವಿಧಾನ ಬದ್ಧವಾಗಿ ನಡೆಯದೆ, ಆರ್‌ಎಸ್‌ಎಸ್  ಜತೆಗೆ ಸೇರಿ ಕೋಮುವಾದಿ ಸಂಘಟನೆಗಳ ಪ್ರಧಾನ ಕಚೇರಿಯಾಗಿಸಿದ್ದಾರೆ. ವಾತಾವರಣ ಕೆಡಿಸಲಾಗಿದೆ. ದೊಡ್ಡವರು ಎನಿಸಿಕೊಂಡರೆ ಹೀಗೆ ಮಾಡುತ್ತಿದ್ದಾರೆ. ರಾಮ ನವಮಿ, ಆರ್‌ಎಸ್‌ಎಸ್ ಪರೇಡ್, ಹನುಮಾನ ಚಾಲೀಸಾ ಓದುವುದು, ಹೋಮ ಹವನ ಮಾಡುವುದು, ಆರ್‌ಎಸ್‌ಎಸ್ ಮುಖಂಡರನ್ನು ಕರೆಸಿ ಮಾತನಾಡಿಸಿ ವಿದ್ಯಾರ್ಥಿಗಳಲ್ಲಿ ಕೋಮುವಾದ ಹುಟ್ಟುಹಾಕಲಾಗುತ್ತಿದೆ. ಕೆಲ ದಿನಗಳ ಹಿಂದೆ ಎಬಿವಿಪಿಯ ಮಂಗಳೂರಿನ ಪ್ರಮುಖರನ್ನು  ಕರೆಸಿ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸಲಾಗಿದೆ ಎಂದು ವಿಡಿಯೋದಲ್ಲಿ ತಿಳಿಸಿz್ದÁರೆ. ನರೋಣಾ ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net