ವಿವೇಕಾನಂದರಿಗೆ ಅಪಮಾನ ಸಿಯುಕೆ ಉದ್ರಿಕ್ತ : ಕುಲಪತಿಗಳಿಗೆ ಘೇರಾವ ಹಾಕಿ ವಿದ್ಯಾರ್ಥಿಗಳ ಎರಡು‌‌ ಗುಂಪುಗಳಿಂದ ಪ್ರತ್ಯೇಕ ಪ್ರತಿಭಟನೆ

IMG-20230915-WA0027
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸ್ವಾಮಿ ವಿವೇಕಾನಂದರ ಭಾವಚಿತ್ರ ಇರುವ ಸ್ಟಿಕರ್‌ನ್ನು ಕಿಡಿಗೇಡಿಗಳು ಡಸ್ಟ್ ಬಿನ್‌ಗೆ ಅಂಟಿಸಿ ಅಪಮಾನ ಮಾಡಿದ ಘಟನೆ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ  ಶುಕ್ರವಾರ ನಡೆದಿದೆ. ಇದರಿಂದ ವಿದ್ಯಾರ್ಥಿಗಳು ಕುಲಪತಿಗೆ ಘೇರಾವ್ ಹಾಕಿದ್ದಾರೆ. ಕೇರಳ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ವಿದ್ಯಾರ್ಥಿಗಳ ಗುಂಪುಗಳು ಪ್ರತಿಭಟನೆಗಿಳಿದ್ದರಿಂದ ಕ್ಯಾಂಪಸ್ ಉದ್ರಿಕ್ತಗೊಂಡಿತ್ತು.
ಗ್ರAಥಾಲಯದಲ್ಲಿ ಸರಸ್ವತಿ ಮೂರ್ತಿ ಇಟ್ಟಿರುವುದಕ್ಕೆ ಪ್ರತಿಯಾಗಿ ಕೆಲ ದಿನಗಳ ಹಿಂದಷ್ಟೆ ಕಾರ್ಯಸೌಧ ಮುಂಭಾಗದಲ್ಲಿ ಬೆಳಗಿನ ಜಾವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪಿಸಿದ್ದರಿಂದ ದಿನವಿಡಿ ಕ್ಯಾಂಪಸ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಅದರ ಇನ್ನೊಂದು ಸ್ವರೂಪದ ಘಟನೆ ನಡೆದಿದ್ದು, ಸಿಯುಕೆಯಲ್ಲಿ ದಿನೇ ದಿನೆ ಎಡ ಮತ್ತು ಬಲ ಪಂಥಿಯ ಸಂಘರ್ಷ ತಾರಕಕ್ಕೇರುತ್ತಿದೆ.
ಕ್ಯಾಂಪಸ್‌ನಲ್ಲಿರುವ ಭೀಮಾ ಹಾಸ್ಟೇಲ್ ಗೋಡೆ ಮೇಲೆ ಸ್ವಾಮಿ ವಿವೇಕಾನಂದರ ಚಿತ್ರವಿರುವ ಜಾಯಿನ್ ಎಬಿವಿಪಿ ಎಂಬ ಪೋಸ್ಟರ್‌ಗಳನ್ನು ಕೆಲದಿನಗಳ ಹಿಂದೆ ಸಂಘಟನೆ ವಿದ್ಯಾರ್ಥಿಗಳು ಅಂಟಿಸಿದ್ದರು. ಸ್ವಾಮಿ ವಿವೇಕಾನಂದ ಭಾವಚಿತ್ರದ ಪೋಸ್ಟರ್‌ನ್ನು ಕಿತ್ತಿದ ಇನ್ನೊಂದು ಗುಂಪಿನ ವಿದ್ಯಾರ್ಥಿಗಳು ಅದನ್ನು ಕಿತ್ತಿ ಕಸದ ತೊಟ್ಟಿಗೆ ಮತ್ತು ಹಾಸ್ಟೆಲ್‌ನಲ್ಲಿಟ್ಟಿರುವ ಡಸ್ಟ್ ಬಿನ್‌ಗೆ ಅಂಟಿಸಿ `ಇದೇ ನಿಮ್ಮ ಸ್ಥಳ `ಎಂದು ಅಡಿ ಬರಹ ಬರೆದು ಇನ್‌ಸ್ಟಾಗ್ರಾಂದಲ್ಲಿ ಆದರ್ಶ ಎಂಬಾತ ಅಪ್‌ಲೋಡ್ ಮಾಡಿದ್ದ. ಕೆಲವರು ಮೊಬೈಲ್ ಸ್ಟೇಟಸ್ ಇಟ್ಟು ವೈರಲ್ ಮಾಡಿದರು. ಇದು  ಪರಿಸ್ಥಿತಿ ಇನ್ನಷ್ಟು ಗರಂ ಆಗಲು ಕಾರಣವಾಯಿತು.
ಸುದ್ದಿ ಹರಡುತ್ತಲೇ ಎಬಿವಿಪಿಯವರು ಸ್ವಾಮಿ ವಿವೇಕಾನಂದರಿಗೆ ಅಪಮಾನ ಮಾಡಲಾಗಿದೆ ಎಂದು ದೂರಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿ ಆದರ್ಶನನ್ನು ತರಗತಿಯಿಂದ ಸಸ್ಪೆಂಡ್ ಮಾಡಲಾಯಿತು. ಸಸ್ಪೆಂಡ್ ಖಂಡಿಸಿ ಮತ್ತು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಕೇರಳÀ ವಿದ್ಯಾರ್ಥಿಗಳು ಸಿಯುಕೆ ಕಾರ್ಯಸೌಧ ಮುಂದೆ ಪ್ರತಿಭಟನೆಗಿಳಿದರು. ಅದಕ್ಕೆ ಪ್ರತಿಯಾಗಿ ಎಬಿವಿಪಿಯವರು ಹೋರಾಟಕ್ಕೆ ಇಳಿದರು. ಹೀಗಾಗಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ಮಾಹಿತಿ ಅರಿಯುತ್ತಲೇ ನರೋಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net