ಕಬ್ಬನ್ ಉದ್ಯಾನ ರಕ್ಷಣೆಗೆ ‘ಸಂರಕ್ಷಣಾ ಸಮಿತಿ’ ರಚನೆ

CC
Published on

ಬೆಂಗಳೂರು: ಕಬ್ಬನ್‌ಪಾರ್ಕ್‌ನಲ್ಲಿ ಇತ್ತೀಚೆಗೆ ಅನಗತ್ಯ ಕಟ್ಟಡಗಳ ನಿರ್ಮಾಣ, ಉದ್ಯಾನ ಜಾಗ ಒತ್ತುವರಿ ಸೇರಿ ಹಲವು ಅನಧಿಕೃತ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳನ್ನು ನಿಯಂತ್ರಿಸುವ ಹಾಗೂ ಕಬ್ಬನ್ ಉದ್ಯಾನ ಸಂರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ‘ಸಂರಕ್ಷಣಾ ಸಮಿತಿ’ ರಚಿಸಿ ಆದೇಶ ಹೊರಡಿಸಿದೆ.

ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯಲ್ಲಿ 33 ಸದಸ್ಯರಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು, ತಜ್ಞರು, ವಾಯುವಿಹಾರಿಗಳು ಮತ್ತು ಪರಿಸರವಾದಿಗಳು ಇದ್ದಾರೆ.

ಕಬ್ಬನ್ ಉದ್ಯಾನದ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ಹಾಗೂ ಪೂರಕ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಸಂಸ್ಥೆಗಳು ಬದ್ಧರಾಗಬೇಕು ಎಂಬ ಆದೇಶದಲ್ಲಿ ತಿಳಿಸಿದೆ.

ವೈವಿಧ್ಯಮಯ ಪ್ರಾಣಿ-ಪಕ್ಷಿ, ಜೀವ ಸಂಕುಲಗಳಿಗೆ ನೆಲೆಯಾಗಿರುವ ಈ ಉದ್ಯಾನ ಸಂರಕ್ಷಿಸುವುದು ಸರಕಾರ ಹಾಗೂ ಸಾರ್ವಜನಿಕರ ಜವಾಬ್ದಾರಿಯಾಗಿದೆ. ಕಬ್ಬನ್ ಪಾರ್ಕ್ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಉಮೇಶ್, ವಾಯುವಿಹಾರಿ ಚಂದ್ರಶೇಖರ್ ಹಾಗೂ ಸಂರಕ್ಷಣಾ ಸಮಿತಿ ಸದಸ್ಯರು ಪ್ರಥಮ ಸಭೆ ಇತ್ತೀಚೆಗೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net