ಅನ್ಯಾಯ ಮಾಡಿದವರಿಂದ ಭಾರತ ನ್ಯಾಯ ಯಾತ್ರೆ : ಮಾಜಿ ಸಚಿವ ಸಿ.ಟಿ.ರವಿ ಲೇವಡಿ

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ ದೇಶಕ್ಕೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಅನ್ಯಾಯ ಮಾಡಿದವರೇ ಈಗ ಭಾರತ ನ್ಯಾಯ ಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದರು.
FB_IMG_1703913729518
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೆಲ್ಲ ದೇಶಕ್ಕೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಅನ್ಯಾಯ ಮಾಡಿದವರೇ ಈಗ ಭಾರತ ನ್ಯಾಯ ಯಾತ್ರೆ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ.ರವಿ ಕಿಡಿಕಾರಿದರು.
ನಗರದ ಹೊರವಲಯದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರ ಜತೆಗೆ ಮಾತನಾಡಿ, ಕಾಂಗ್ರೆಸ್ ಸಂಸದರಾಗಿರುವ ರಾಹುಲ್‌ಗಾಂಧಿ  ಆರಂಭಿಸಲಿರುವ ಭಾರತ ನ್ಯಾಯ ಯಾತ್ರೆಗೆ ಲೇವಡಿ ಮಾಡಿದರು. ಕಾಂಗ್ರೆಸ್ ಆಡಳಿತ ನಡೆಸಿದಾಗಲೇ ಭಾರತಕ್ಕೆ ಅನ್ಯಾಯವಾಗಿದೆ. ಈಗ ಯಾವ ಕಾರಣಕ್ಕೆ ಹೊಸ ಯಾತ್ರೆ ಎಂದು ಪ್ರಶ್ನಿಸಿದರು.
ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ  ಕಾಯಂ ಸದಸ್ಯತ್ವದ ಆಫರ್ ಬಂದಿತ್ತು. ಅದನ್ನು ಕಾಂಗ್ರೆಸ್ ಏಕೆ  ನಿರಾಕರಿಸಿತು ಹೇಳಲಿ ?, ಸಿಯಾಚಿನ್ ಭಾಗವನ್ನು ಚೀನಾ ಆಕ್ರಮಣ ಮಾಡಿಕೊಂಡಾಗ ಆ ಜಾಗದಲ್ಲಿ ಹುಲ್ಲು ಸಹ ಬೆಳೆಯಲ್ಲ ಅಂತ ಹೇಳಿದ್ದು ಯಾರು  ಎಂದು ಮರುಪ್ರಶ್ನೆ ಹಾಕಿದರು.
ಭಾರತಕ್ಕೆ ಮಾಡಿದ ಅನ್ಯಾಯಕ್ಕಾಗಿ ಮೊದಲು ರಾಹುಲ್‌ಗಾಂಧಿ ಮತ್ತು ಕಾಂಗ್ರೆಸ್‌ನವರು P್ಷÀಮೆ ಕೇಳಲಿ. ಕಾಂಗ್ರೆಸ್‌ನವರಿಗೆ ಇದು ಪ್ರಾಯಶ್ಚಿತದ ಕಾಲ ಅದನ್ನು ಮಾಡಲಿ ಎಂದು ಕಿವಿಮಾತು ಹೇಳಿದರು.
ಈಗಲೂ ದೇಶದಲ್ಲಿ ಭಾಷೆ ಭಾಷೆಗಳ ಆಧಾರದ ಮೇಲೆ ಜನರನ್ನು ಎತ್ತಿ ಕಟ್ಟುವ ಕೆಲಸ  ಕಾಂಗ್ರೆಸ್ ಮಾಡುತ್ತಿದೆ. ಉತ್ತರದ ವಿರುದ್ದ ದಕ್ಷಿಣದವರನ್ನು, ದಕ್ಷಿಣದ ವಿರುದ್ದ ಉತ್ತರದವರನ್ನು ಎತ್ತಿ ಕಟ್ಟಲಾಗುತ್ತಿದೆ. ಹಿಂದೆ ಬ್ರಿಟಿಷರು ಹಿಂದೂ-ಮುಸ್ಲಿA ಅಂತ ಅಷ್ಟೇ ಒಡೆದಿದ್ದರು. ಆದರೆ, ಕಾಂಗ್ರೆಸ್ ಜಾತಿ ಜಾತಿಗಳ ನಡುವೆ ಒಡೆದಾಳುತ್ತಿದೆ ಎಂದು ಸಿ.ಟಿ.ರವಿ ಆರೋಪಿಸಿದರು.
ಆರೋಪ ಬದಲು ತನಿಖೆ ನಡೆಸಲಿ

ಕೋವಿಡ್ ನಿರ್ವಹಣೆಗಾಗಿ ಮಾಜಿ ಸಿಎಂ ಯಡಿಯೂರಪ್ಪ  ಅವರ ಅವಧಿಯಲ್ಲಿ ೪೦ ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಕ್ಕೆ, ಪ್ರಕ್ರಿಯಿಸಿ, ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ಆರೋಪ ಪ್ರತ್ಯಾರೋಪ ಮಾಡುವುದು ಬಿಟ್ಟು  ತನಿಖೆ ನಡೆಸಲಿ ಎಂದು ಸಿ.ಟಿ.ರವಿ ಹೇಳಿದರು.
ನ್ಯಾ,ನಾಗಮೋಹನ ದಾಸ ನೇತೃತ್ವದ ಸಮಿತಿ ತನಿಖೆ ನಡೆಸುತ್ತಿದೆ. ಅವರÀಲ್ಲಿ ದಾಖಲೆಗಳಿದ್ದರೆ ಬಹಿರಂಗ ಪಡಿಸಲಿ. ತನಿಖೆ ನಡೆಸುತ್ತಿರುವವರಿಗೆ ಸಲ್ಲಿಸಲಿ ಎಂದು ಸಲಹೆ ನೀಡಿದರು. ಅದು ಬಿಟ್ಟು ರಾಜಕಿಯದ ಕಾರಣ ಆರೋಪ ಪ್ರತ್ಯಾರೋಪ ಮಾಡುವುದು ಸರಿಯಲ್ಲ. ಆ ಬಗ್ಗೆ ಮಾತನಾಡಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net