

ಚನ್ನಪಟ್ಟಣ
ಸಂತಾನಭಾಗ್ಯ ಇಲ್ಲ ಎಂದು ಕೊರಗುವ ಸಾವಿರಾರು ತಾಯಂದಿರ ಮಧ್ಯೆ, ಇಲ್ಲೋರ್ವ ನಿರ್ದಯಿ ತಾಯಿಯೊಬ್ಬಳು ತನ್ನ ಮುದ್ದಾದ ಗಂಡುಮಗುವನ್ನು ನದಿಗೆ ಎಸೆದು ಸಾಯಿಸಿರುವ ಅಮಾನವೀಯ ಘಟನೆ ತಾಲೂಕಿನ ಕಾಲಿಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಭಾಗ್ಯ ಎಂಬಾಕೆಯೇ ಈ ನಿರ್ದಯಿ ತಾಯಿ. ಈಕೆ ತನ್ನ ಒಂದೂವರೆ ವರ್ಷದ ಗಂಡುಮಗುವನ್ನು ಬಾಣಗಳ್ಳಿ ಹಾಗೂ ಕೊಂಡಾಪುರ ಗ್ರಾಮದ ಮದ್ಯೆ ಇರುವ ಕಣ್ವ ಹೊಳೆಗೆ ಎಸೆದು ಸಾಯಿಸಿದ್ದಾಳೆ. ಮಂಗಳವಾರ ಸಂಜೆ ಈಕೆ ಈ ಪೈಶಾಚಿಕ ಕೃತ್ಯ ಎಸಗಿದ್ದು, ಬುಧವಾರ ಬೆಳಿಗ್ಗೆ ಮಗುವಿನ ಮೃತದೇಹ ಪತ್ತೆಯಾಗಿದೆ.
ಕಾಲಿಕೆರೆ ಗ್ರಾಮದ ಭಾಗ್ಯ ಎಂಬಾಕೆಯನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ, ಈಕೆ ಗಂಡನನ್ನು ತೊರೆದು ತಾಯಿಯ ಜೊತೆ ವಾಸವಿದ್ದಳು.
ಮಂಗಳವಾರ ಸಂಜೆ ತಾಯಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿಕೊಂಡಿದ್ದ, ಈ ಭಾಗ್ಯ, ಮುದ್ದಾದ ಮಗುವಿನ ಬದುಕುವ ಭಾಗ್ಯ ಕಸಿದುಕೊಂಡಿದ್ದಾಳೆ. ಈ ನಿರ್ದಯಿ ತಾಯಿಯ ಕೃತ್ಯ ಆಕ್ರೋಶಕ್ಕೆ ಕಾರಣವಾಗಿದೆ.