ಕೆಆರ್‌ಎಸ್‌ನಲ್ಲಿ ಪ್ರವಾಸಿಗರ ದಂಡು

1703597115881
Published on

ಕೆ.ಆರ್.ಸಾಗರ: ಸತತ ಮೂರು ರಜಾ ದಿನಗಳ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಬೃಂದಾವನಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ವೀಕ್ಷಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲೇ ಅತಿ ಹೆಚ್ಚು ಪ್ರವಾಸಿಗರು ಬೃಂದಾವನ ವೀಕ್ಷಣೆ ಮಾಡಿದ್ದಾರೆ ಎಂದು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಅಣೆಕಟ್ಟು ಮತ್ತು ಬೃಂದಾವನ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಾರೂಕು ಅಭು ತಿಳಿಸಿದರು.


ಶನಿವಾರದಿಂದ ವಿದೇಶಿ ಪ್ರವಾಸಿಗರೂ ಸೇರಿದಂತೆ ದೇಶ ಹಾಗೂ ವಿವಿಧ ರಾಜ್ಯಗಳ ಸಾವಿರಾರು ಪ್ರವಾಸಿಗರು ಬೃಂದಾವನ ನೀರಿನ ಕಾರಂಜಿ ಹಾಗೂ ನವೀಕೃತ ಸಂಗೀತ ಕಾರಂಜಿ ವೀಕ್ಷಿಸಿದ್ದಾರೆ.
ಮೂರು ದಿನ ರಜೆ ಇದ್ದ ಕಾರಣ ಸಾವಿರಾರು ವಾಹನಗಳಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಬೃಂದಾವನದ ಪಾರ್ಕಿಂಗ್ ತುಂಬಿ ಹೋಗಿತ್ತಲ್ಲದೆ, ರಸ್ತೆ ಚಿಕ್ಕದಾಗಿರುವ ಕಾರಣ ಟೋಲ್ ಬಳಿಯಿಂದ ಸುಮಾರು 3 ಕಿ.ಮೀ ರಸ್ತೆಯಲ್ಲಿ ವಾಹನಗಳು ನಿಂತಿದ್ದವು.


ಟ್ರಾಫಿಕ್ ಜಾಮ್‌ನಿಂದ ಕೆ.ಆರ್.ಸಾಗರ ಪೊಲೀಸರು ನಿಯಂತ್ರಣ ಮಾಡಲು ಹರಸಹಾಸ ಮಾಡಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net