ಆಲತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಬೆಳೆ ನಾಶ

25-FEB-GPT-1A
ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಸಿದ್ದೇಗೌಡ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ತೆಂಗು ನಾಶಪಡಿಸಿವೆ.
Published on

ಗುಂಡ್ಲುಪೇಟೆ: ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಆನೆಗಳ ಹಿಂಡು ನಡೆಸಿದ ದಾಳಿಯಿಂದ ರೈತರ ಜಮೀನುಗಳಲ್ಲಿ ಬೆಳೆದಿದ್ದ ಫಸಲು ಹಾಗೂ ಫಲ ಕೊಡುತ್ತಿದ್ದ ತೆಂಗಿನ ಮರಗಳು ನೆಲಕಚ್ಚಿವೆ.

ಇತ್ತೀಚೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ವಲಯದ ಕಾಡಂಚಿನ ಗ್ರಾಮದಲ್ಲಿ ಆನೆಗಳ ದಾಳಿ ಹೆಚ್ಚಾಗಿದೆ. ಸೋಮವಾರ ತಡರಾತ್ರಿ ಆನೆಗಳ ಹಿಂಡು ಗ್ರಾಮದ ಸಿದ್ದೇಗೌಡ ಎಂಬುವರ ಜಮೀನಿಗೆ ನುಗ್ಗಿ 10ಕ್ಕೂ ಹೆಚ್ಚಿನ ತೆಂಗಿನ ಸಸಿಗಳನ್ನು ಮುರಿದುಹಾಕಿವೆ. ನಾಲ್ಕು ದಿನಗಳ ಹಿಂದೆ ಗ್ರಾಮದ ಶಾಂತೇಶ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ಮರಗಳನ್ನು ಕಿತ್ತೆಸೆದಿದ್ದ ಘಟನೆ ಮರೆಯುವ ಮೊದಲೇ ಆನೆಗಳು ಮತ್ತೆ ದಾಳಿ ನಡೆಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net