ಬೆಳೆ ರಕ್ಷಣೆಗೆ ಕೈ ಪಿರಂಗಿ ಮೊರೆ ಹೋದ ರೈತರು

Untitled design
ಕೊಟ್ಟೂರು ತಾಲೂಕಿನ ಸುಟ್ಟಕೋಡಿಹಳ್ಳಿ ಗ್ರಾಮದ ರೈತ ಮೂಕಪ್ಪರ ಮೂಗಪ್ಪ ಹಂದಿಗಳನ್ನು ಬೆದರಿಸಲು ತಂದಿರುವ ಕೈ ಪಿರಂಗಿ.
Published on

ಕೊಟ್ಟೂರು: ಐದಾರು ಕಾಡು ಹಂದಿಗಳ ಹಿಂಡು ರಾತ್ರಿ ಹೊಲವೊಂದಕ್ಕೆ ದಾಳಿ ಇಟ್ಟರೆ ಮೆಕ್ಕಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಯನ್ನು ಹಾಳು ಮಾಡುತ್ತಿವೆ. ಇದರಿಂದ ಸಿಡೆದೆದ್ದ ರೈತರು ಕೈ ಪಿರಂಗಿ ಸಾಧನದ ಮೊರೆ ಹೋಗಿದ್ದಾರೆ.


ರೈತರು ರಾತ್ರಿ ಹಂದಿಗಳಿಂದ ಬೆಳೆಗಳನ್ನು ಕಾಪಾಡಿಕೊಳ್ಳಲು ಪಟಾಕಿ ಸಿಡಿಸಿ, ತಮಟೆ ಬಡಿದು ಅವುಗಳನ್ನು ಬೆದರಿಸುವ ಪ್ರಯತ್ನ ವಿಫಲವಾಗಿದ್ದರು. 200 ರೂ. ಬೆಲೆಯ ಈ ಕೈಪಿರಂಗಿ ಪಟಾಕಿಯಂತೆ ದೊಡ್ಡದಾಗಿ ಸದ್ದು ಮಾಡಿ, ಬೆಂಕಿ ಉಗುಳುವುದರಿಂದ ಹಂದಿಗಳ ಹಿಂಡು ಓಡಿಹೋಗುತ್ತವೆ. ಅಲೆಮಾರಿ ವ್ಯಾಪಾರಿಗಳಿಂದ ಇದನ್ನು ಖರೀದಿದ್ದಾರೆ.


ಪಿರಂಗಿ ಒಳಗೆ ಗಂಧಕ ಲೇಪಿತ ಬಟಾಣಿ ಜಲ್ಲಿಯಂತ್ತಿರುವ ಎರಡು ಮೂರು ಹರಳುಗಳಿಗೆ ಸಿರಂಜಿ ಮೂಲಕ ನಾಲ್ಕೈದು ಹನಿ ನೀರು ಹಾಕಿ ಬಟನ್ ಒತ್ತಿದರೆ ಬೆಂಕಿ ಉಗುಳುತ್ತ ದೊಡ್ಡದಾಗಿ ಸದ್ದಾಗುತ್ತದೆ. ಗಂಧಕ ಲೇಪಿತ ಮೂರ‌್ನಾಲ್ಕು ಕಲ್ಲುಗಳಿಂದ ಹತ್ತು ಸಾರಿ ಸ್ಪೋಟಿಸಬಹುದು. ಪಿರಂಗಿ ಸದ್ದಿಗೆ ಹಂದಿ, ಗಿಳಿ, ಗೊರವಂಕಗಳು ಓಡಿ ಹೋಗುತ್ತವೆ. ಕಾಡುಹಂದಿಗಳ ದಾಳಿಯಿಂದ ಸಾಕಷ್ಟು ಬೆಳೆ ನಾಶವಾಗುತ್ತಿತ್ತು. ಕೆಲವು ಸಂದರ್ಭದಲ್ಲಿ ಕಾಡು ಹಂದಿಗಳ ದಾಳಿಗೆ ರೈತರು ಬಲಿಯಾಗಿದ್ದರು. ಇದನ್ನೆಲ್ಲ ಈ ಕೈ ಪಿರಂಗಿ ತಪ್ಪಿಸಲಿದೆ ಎನ್ನುತ್ತಾರೆ ರೈತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net