

| ಕೃಷಿ ಇಲಾಖೆ ಕ್ರಮದ ನಡುವೂ ಹೆಚ್ಚಿದ ಪೀಡಕ
| ಹಿಪ್ಪು ನೇರಳೆ ತೋಟಗಳಲ್ಲಿ ಸೊಪ್ಪಿನ ಇಳುವರಿ ಕುಂಠಿತ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ನುಸಿ ಮತ್ತು ಥ್ರಿಪ್ಸ್ ಕೀಟಬಾಧೆ ದಿನೇದಿನೆ ಉಲ್ಬಣವಾಗುತ್ತಿದ್ದು, ಜಿಲ್ಲೆಯ ರೇಷ್ಮೆ ಬೆಳೆಗಾರಿಗೆ ನಷ್ಟದ ಭೀತಿ ಎದುರಾಗಿದೆ.
ಹಿಪ್ಪು ನೇರಳೆ ತೋಟಗಳಲ್ಲಿ ನುಸಿ ಮತ್ತು ಥ್ರಿಪ್ಸ್ ಕೀಟಬಾ`É ನಿಯಂತ್ರಣಕ್ಕಾಗಿ ರೇಷ್ಮೆ ಇಲಾಖೆ ತೋಟಗಳಲ್ಲಿ ಜಾಗೃತಿ ವಿಶೇಷ ಅಭಿಯಾನ ಕಾರ್ಯಕ್ರಮ ಆಯೋಜಿಸುತ್ತಿದೆಯಾದರೂ ಕೀಟಬಾಧೆ ನಿಯಂತ್ರಣ ಬಾರದೆ ರೈತರು ಚಿಂತೆಗೀಡಾಗುವಂತೆ ಮಾಡಿದೆ.
ಜಿಲ್ಲೆಯಲ್ಲಿ ತೆಂಗು ಮಾವು ಕೃಷಿ ಜತೆಗೆ ಸಾವಿರಾರು ಕುಟುಂಬಗಳು ರೇಷ್ಮೆಯಿಂದ ಬದುಕು ಕಟ್ಟಿಕೊಂಡಿವೆ. ರೈತರು ಆಧುನಿಕ ಪದ್ಧತಿಯಲ್ಲಿ ರೇಷ್ಮೆ ಸೊಪ್ಪು, ಹುಳು ಸಾಕಣೆ ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯುತ್ತಿದ್ದರು. ಆದರೆ, ಈಗ ಹಿಪ್ಪು ನೇರಳೆ ತೋಟಗಳಲ್ಲಿ ನುಸಿ ಮತ್ತು ಥ್ರಿಪ್ಸ್ ಕೀಟಬಾಧೆ ಕಾಣಿಸಿಕೊಂಡಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ. ಸೊಪ್ಪಿನ ಇಳುವರಿ ಕಡಿಮೆಯಾಗಿ ಬೇಡಿಕೆ ಹೆಚ್ಚಿದೆ.
ಉಲ್ಬಣವಾಗುತ್ತಿರುವ ಕೀಟಬಾಧೆ ಹತೋಟಿಗೆ ಮುಂದಾಗಿರುವ ರೇಷ್ಮೆ ಇಲಾಖೆ ರೋಗ ಪೀಡಿತ ತೋಟಗಳಿಗೆ ಹತೋಟಿ ಕ್ರಮ, ಔಷಧಿ ಸಿಂಪಡಣೆ, ವ್ಯವಸಾಯ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೆಯಾದರೂ ಸುಧಾರಣೆ ಕಾಣದಿರುವುದು ರೇಷ್ಮೆ ಕೃಷಿಕರನ್ನು ಚಂತೆಗೀಡು ಮಾಡಿದೆ.
ರೇಷ್ಮೆ ಇಲಾಖೆ ಹೆಚ್ಚಾಗಿ ರಾಸಾಯನಿಕ ಸಿಂಪಡಣೆ ನಡೆಸಿ ಎನ್ನುತ್ತದೆ. ಜತೆಗೆ ಸೊಪ್ಪು ಬೆಳೆಯಲು ಕೊಟ್ಟಿಗೆ ಗೊಬ್ಬರದ ಬದಲಾಗಿ ರಾಸಾಯನಿಕ ಗೊಬ್ಬರಕ್ಕೆ ಸಲಹೆ ನೀಡಲಾಗುತ್ತಿದೆ. ಇದರಿಂದ ಕೀಟಬಾಧೆ ಹೆಚ್ಚುತ್ತಿದೆ. ಭೂಮಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಕೃಷಿ ಇಲಾಖೆ ಸಾವಯವ ಮತ್ತು ಜೀವಾಮೃತ ಗೊಬ್ಬರಕ್ಕೆ ಒತ್ತು ನೀಡುವಂತೆ ಮನವರಿಕೆ ಮಾಡಿಕೊಟ್ಟರೆ ರೋಗಕ್ಕೆ ಕಡಿವಾಣ ಹಾಕಬಹುದು ಎನ್ನುತ್ತಾರೆ ರೇಷ್ಮೆ ಬೆಳೆಗಾರ ಗುನ್ನೂರು ಮಹದೇವಯ್ಯ.
ಕೀಟಬಾಧೆ ನಿಯಂತ್ರಿಸಲು ಕಡ್ಡಿ ಕಟಾವಾದ 20 ದಿನಕ್ಕೆ ಔಷಧ ಸಿಂಪಡಣೆ ಮಾಡಬೇಕು. ಪ್ರತಿ ತೋಟಗಳಲ್ಲಿಯೂ ಔಷಧ ಸಿಂಪಡನೆಯಾಗಬೇಕು. ರೈತರು ಸಾಮೂಹಿಕವಾಗಿ ಔಷಧ ಸಿಂಪಡಣೆ ಮಾಡಿದರೆ ರೋಗ ರೇಷ್ಮೆ ತೋಟಗಳಿಗೆ ಹರಡದಂತೆ ತಡೆಗಟ್ಟಬಹುದು ಎನ್ನುತ್ತಾರೆ ರೇಷ್ಮೆ ಅಧಿಕಾರಿಗಳು.
ನುಸಿ ಮತ್ತು ಥ್ರಿಪ್ಸ್ ಕೀಟಬಾಧೆ ಬೆಳೆದ ಸೊಪ್ಪಿನ ಸುಳಿ ತಿನ್ನುವುದರಿಂದ ಇಳುವರಿ ಕಡಿಮೆ ಆಗುತ್ತಿದೆ. 100 ಮೊಟ್ಟೆ ಚಾಕಿ ಹುಳು ಬೆಳೆಯುವ ತೋಟದಲ್ಲಿ ಇಂದು 50 ಮೊಟ್ಟೆ ಚಾಕಿ ಹುಳು ಬೆಳೆಯಲು ಆಗುತ್ತಿಲ್ಲ. ಎರಡೂ ಮೂರು ಭಾರಿ ಔಷಧಿ ಸಿಂಪಡಣೆ ಮಾಡಿದರೂ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. | ಎಲ್.ಎಂ. ಸಂತೋಷ್ರೇಷ್ಮೆ ಬೆಳೆಗಾರ ರೈತ, ಲಕ್ಕೋಜನಹಳ್ಳಿ=ರೇಷ್ಮೆ ತೋಟಗಳಿಗೆ ಹರಡಿರುವ ನುಸಿ ಮತ್ತು ಥ್ರಿಪ್ಸ್ ಕೀಟಬಾಧೆ ನಿಯಂತ್ರಣ, ಔಷಧಿ ಕ್ರಮಗಳ ಬಗ್ಗೆ ಜಿಲ್ಲೆಯಲ್ಲಿ ಪ್ರತಿದಿನ ಎರಡು ಗ್ರಾಮಗಳಲ್ಲಿ ತಿಳಿವಳಿಕೆ ನೀಡಲು ಜಾಗೃತಿ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಇದುವರೆವಿಗೂ ಜಿಲ್ಲೆಯಲ್ಲಿ 60 ಜಾಗೃತಿ ಕಾರ್ಯಕ್ರಮಗಳನ್ನು ರೈತರ ತೋಟಗಳಲ್ಲೇ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಗಿದೆ. | ಚಂದ್ರಪ್ಪಉಪ ನಿರ್ದೇಶಕರು, ರೇಷ್ಮೆ ಇಲಾಖೆ, ರಾಮನಗರ ಫೆಬ್ರವರಿ ಕೊನೇ ಭಾಗದಿಂದ ಜುಲೈವರೆಗೂ ಕೀಟಬಾಧೆ ವ್ಯಾಪಕವಾಗಿದೆ. ಪ್ರಾರಂಭದಲ್ಲೇ ನಿಯಂತ್ರಣ ಕ್ರಮ ಅನುಸರಿಸಿದರೆ ರೋಗ ಹತೋಟಿಗೆ ಬರುತ್ತದೆ. ಅಂತೆಯೇ, ಇಲಾಖೆ ಮುಂಜಾಗ್ರತ ಕ್ರಮವಾಗಿ ಸಾಕಷ್ಟು ತಿಳಿವಳಿಕೆ ಕಾರ್ಯಕ್ರಮ ಕೈಗೊಂಡಿದೆ. | ಉಮೇಶ್ಸಹಾಯಕ ನಿರ್ದೇಶಕ, ರೇಷ್ಮೆ ಇಲಾಖೆ. ರಾಮನಗರ ವಿ`Áಗ==