

ಹನಗೋಡು: ಕಾಡಂಚಿನ ಮುದಗನೂರು ಗ್ರಾಮದಲ್ಲಿ ಬುಧವಾರ ರಾತ್ರಿ ಕಾಡಾನೆ ದಾಳಿಯಿಂದ ಜೋಳ, ಬಾಳೆ, ಶುಂಠಿ, ಅಡಕೆ, ತೆಂಗು ಬೆಳೆ ನಾಶವಾಗಿದೆ.
ನಾಗರಹೊಳೆ ಕಾಡಿನಿಂದ ಹೊರಬಂದ ಕಾಡಾನೆಗಳು ಮುದಗನೂರು ಗ್ರಾಮದ ಶಿವನಂಜೇಗೌಡರ ಮಗ ನಾಗೇಶ್ ಅವರು ಬೆಳೆದಿದ್ದ ತೆಂಗು, ಬಾಳೆ, ಅಡಕೆ, ಕಸ್ತೂರಿಗೌಡ ಅವರ ಮುಸುಕಿನ ಜೋಳ ಹಾಗೂ ಬಾಳೆಯನ್ನು ತಿಂದು ತುಳಿದು ಸಾವಿರಾರು ರೂ. ನಷ್ಟವನ್ನುಂಟು ಮಾಡಿವೆ. ಇದಲ್ಲದೆ ತೋಟದ ಮನೆಯ ಮುಂದೆ ನಿಲ್ಲಿಸಿದ್ದ ಕಾರನ್ನೂ ಜಖಂಗೊಳಿಸಿವೆ. ಬೆಳೆ ಹಾನಿ ಪ್ರದೇಶಕ್ಕೆ ವೀರನಹೊಸಹಳ್ಳಿ ವಲಯದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮಹಜರು ನಡೆಸಿದರು.