ಪ್ರವಾಹ ಜೊತೆ ಮೊಸಳೆ ಭೀತಿ..!

IMG-20220718-WA0080
Published on

ಬಾಗಲಕೋಟೆ: ಜಿಲ್ಲೆಯ ಕೃಷ್ಣಾ ನದಿ ತೀರದಲ್ಲಿ ಒಂದು ಕಡೆ ನೀರಿನ ಹರಿವು ಹೆಚ್ಚಾಗಿ ಪ್ರವಾಹ ಭೀತಿ ಉಂಟಾಗಿದೆ. ಮತ್ತೊಂದೆಡೆ ನದಿ ದಡದಲ್ಲಿ ಮೊಸಳೆ ಕಾಟವೂ ಶುರುವಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದ್ದು, ಜನರು ಡೋಣಿ ಪ್ರಯಾಣ ಮಾಡುತ್ತಿದ್ದಾರೆ. ಇದೀಗ ನದಿ ದಡದಲ್ಲಿ ಮೊಸಳೆಗಳು ಪ್ರತ್ಯಕ್ಷ ಆಗುತ್ತಿದ್ದು, ದೋಣಿ ಪ್ರಯಾಣಿಕರಲ್ಲಿ ಭೀತಿ ಹೆಚ್ಚಿದೆ. ಇಂದು ಅಸ್ಕಿ ಗ್ರಾಮಸ್ಥರು ದೋಣಿಯಲ್ಲಿ ಪಯಾಣಿಸುವ ವೇಳೆ ಮೊಸಳೆ ಪ್ರತ್ಯಕ್ಷವಾಗಿದೆ. ಜೊತೆಗೆ ದಡದಲ್ಲೂ ಸಹ ಮೊಸಳೆ ಕಾಣಿಸಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಗಮನ ಹರಿಸಿ, ಮೊಸಳೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಜನರಲ್ಲಿ ಆತಂಕ ದೂರ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net