ಆಲಮಟ್ಟಿ ಜಲಾಶಯದ ಹಿನ್ನೀರಲ್ಲಿ ಯುವರೈತನ ಮೇಲೆ ಮೊಸಳೆ ದಾಳಿ! ಮಾಲೀಕನ ಜೀವ ಉಳಿಸಿದ ಎತ್ತು | Crocodile Attack

Crocodile attack
Published on

ಬಾಗಲಕೋಟೆ: ಎತ್ತಿನ‌ ಮೈ ತೊಳೆಯಲು ಹೋದ ಯುವರೈತನ ( Young Farmer ) ಮೇಲೆ ಮೊಸಳೆ ದಾಳಿ ( Crocodile Attack ) ನಡೆಸಿರುವ ಆಘಾತಕಾರಿ ಘಟನೆ ಹೊನ್ಯಾಳ ಗ್ರಾಮದ ಬಳಿಯ ಆಲಮಟ್ಟಿ ಜಲಾಶಯ ( Almatti Dam ) ದ ಹಿನ್ನೀರಿನಲ್ಲಿ ನಡೆದಿದೆ.

ಧರಿಯಪ್ಪ ಮೇಟಿ (32) ಮೊಸಳೆಯಿಂದ ದಾಳಿಗೊಳಗಾದ ಯುವರೈತ. ಧರಿಯಪ್ಪನ ಬಲಗೈಗೆ ಮೊಸಳೆ ಬಾಯಿ‌ ಹಾಕಿದ ಪರಿಣಾಮ ಬಲಗೈ ಕಟ್​ ಆಗಿದೆ. ದಾಳಿಯ ವೇಳೆ ಎಡಗೈಯಲ್ಲಿ ಎತ್ತಿನ ಹಗ್ಗ ಹಿಡಿದಿದ್ದರಿಂದ ಯುವರೈತನನ್ನು ಎತ್ತು ಹಿನ್ನೀರಿನಿಂದ ಹೊರಎಳೆದುತಂದಿದೆ. ದಡಕ್ಕೆ ಬರುತ್ತಿದ್ದಂತೆ ಮೊಸಳೆ, ಯುವರೈತನನ್ನು ಬಿಟ್ಟು ಮತ್ತೆ ನೀರಿನೊಳಗೆ ಓಡಿದೆ. ಆದರೆ, ಅಷ್ಟರಲ್ಲೇ ಬಲಗೈ ಮೊಸಳೆ ಬಾಯಿಗೆ‌ ಸಿಲುಕಿ ಕಟ್ ಆಗಿತ್ತು.

ಎತ್ತಿನ ಹಗ್ಗದ ಆಸರೆಯಿರದಿದ್ದರೆ ಯುವರೈತ ಧರಿಯಪ್ಪನ ಜೀವವೇ ಹೋಗುತ್ತಿತ್ತು. ಗಂಭೀರವಾಗಿ ಗಾಯಗೊಂಡ ಯುವರೈತನನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬೀಳಗಿ ಶಾಸಕ ಜೆ.ಟಿ. ಪಾಟೀಲ, ಗಾಯಾಳು ರೈತನ ಆರೋಗ್ಯ ವಿಚಾರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಶಾಸಕರು, ಎಲ್ಲ ದಾಖಲೆಗಳನ್ನು ಕಲೆ ಹಾಕಿ ಪರಿಹಾರ ಪ್ರಕ್ರಿಯೆ ನಡೆಸಲು ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net