ಖಾತ್ರಿ ಅವ್ಯವಹಾರ ಎಇಇ ವಿರುದ್ಧ ಕ್ರಿಮಿನಲ್ ಕೇಸ್

NAREGA WORK
Published on

ನರಿಬೋಳ ಗ್ರಾಪಂನಲ್ಲಿ ನರೇಗಾದಲ್ಲಿ ಅಕ್ರಮ | ೫ ಇಂಜಿನಿಯರ್ ಸೇರಿ ೬ ಜನರ ವಿರುದ್ಧ ದೂರು ದಾಖಲಿಸಲು ಸಿಇಒ ಆದೇಶ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜೇವರ್ಗಿ ತಾಲೂಕಿನ ನರಿಬೋಳ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ನರೇಗಾ ಯೋಜನೆಯ ಅನುದಾನ ದುರುಪಯೋಗ ಮಾಡಿಕೊಂಡ  ಆರೋಪದ ಹಿನ್ನೆಲೆಯಲ್ಲಿ ಐವರು ಇಂಜಿನಿಯರ್‌ಗಳು ಸೇರಿದಂತೆ ಒಟ್ಟು  ಆರು ಜನರ ವಿರುದ್ಧ  ಕ್ರಿಮಿನಲ್ ಕೇಸ್ ದಾಖಲಿಸಲು ಕಲಬುರಗಿ ಜಿಪಂ ಸಿಇಒ ಭಂವರ್‌ಸಿAಗ್ ಮೀನಾ ಆದೇಶಿಸಿದ್ದಾರೆ.


ಜೇವರ್ಗಿಯ ಹಿಂದಿನ ಎಇಇಗಳಾಗಿರುವ ಸುಭಾಶಚಂದ್ರ 
ಜೇವರ್ಗಿಯ ಹಿಂದಿನ ಎಇಇಗಳಾಗಿರುವ ಸುಭಾಶಚಂದ್ರ ಸಂಭಾಜಿ, ಬಿ.ಎಂ.ಪಾಟೀಲ್, ಜಗದೇವ ಜೀವಣಗಿ,  ಎಇಇ ಚಂದ್ರಕಾAತ ಮಲ್ಲೆ, ಕಿರಿಯ ಅಭಿಯಂತರ ಅನೀಲಕುಮಾರ ಪಾಟೀಲ್ ಹಾಗೂ ಶಾಖಾಧಿಕಾರಿ ದೇವಣ್ಣ ಕಟ್ಟಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರ ಬರೆದು ಸಿಇಒ ಸೂಚಿಸಿದ್ದಾರೆ.


ನರಿಬೋಳ ಗ್ರಾಪಂ ವ್ಯಾಪ್ತಿಯಲ್ಲಿ ಸಮುದಾಯ ಗೋದಾಮು ನಿರ್ಮಾಣ, ರಾಜೀವಗಾಂಧಿ ಸೇವಾ ಕೇಂದ್ರ ನಿರ್ಮಾಣ, ನರಿಬೋಳದಿಂದ ಮಲ್ಲಾ ಗ್ರಾಮಕ್ಕೆ ಹೋಗುವ ರಸ್ತೆ ನಿರ್ಮಾಣ ಕೆಲಸಗಳನ್ನು ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿತ್ತು. ಕೆಲಸಗಳನ್ನು ಕಳಪೆ ಮಾಡಲಾಗಿದೆ. ಕೂಲಿ ಮೊತ್ತ ಮತ್ತು ಸಾಮಗ್ರಿಗಳ ಮೊತ್ತ ಪಾವತಿಯಲ್ಲಿ  ಅಕ್ರಮ ನಡೆದಿದೆ  ಎಂದು ಶ್ರೀರಾಮ ಸೇನೆಯ ಶರಣಪ್ಪ ರೆಡ್ಡಿ ಮತ್ತು ಎಂ.ಎಸ್.ಪಾಟೀಲ್ ನರಿಬೋಳ ಇತರರು ಸೇರಿಕೊಂಡು ಹೋರಾಟ ನಡೆಸಿದ್ದರು. ಅಲ್ಲದೆ   ಓಂಬುಡ್ಸ್ ಪರ್ಸನ್ (ಓಂಬುಡ್ಸ್ಮನ್) ಅವರಿಗೆ ದೂರು ಸಲ್ಲಿಸಿದ್ದರು. ಅವರು ಕಾಮಗಾರಿ ಪರಿಶೀಲನೆ ನಡೆಸಿ  ಅಕ್ರಮ ನಡೆದಿರುವುದು ಮತ್ತು ಕಾಮಗಾರಿ ಪೂರ್ಣಗೊಳಿಸದೆ ಹೆಚ್ಚುವರಿ ಮೊತ್ತ ಪಾವತಿಸಿರುವುದು ಕಂಡು ಬಂದಿತ್ತು.


ಭೌತಿಕವಾಗಿ ಪರಿಶೀಲನೆ ನಡೆಸಿದಾಗ ಹೆಚ್ಚುವರಿ ಮೊತ್ತ ಪಾವತಿಸಿ ಸರ್ಕಾರಕ್ಕೆ ನಷ್ಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಐವರು ಎಇಇಗಳು ಹಾಗೂ ಶಾಖಾಧಿಕಾರಿಗಳಿಂದ ಒಟ್ಟು ೧೦.೨೧ ಲಕ್ಷ ರೂ.ಗಳನ್ನು ವಸೂಲಿ ಮಾಡುವಂತೆ  ಓಂಬುಡ್ಸ್ ಪರ್ಸನ್ ಶಿಫಾರಸ್ಸು ಮಾಡಿದ್ದಾರೆ.ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು  ಸಿಇಒ ಅವರು ಪತ್ರದಲ್ಲಿ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದ್ದಾರೆ.


ಜಿಪಂ ಸಿಇಒ ಅವರು  ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನ್ ಕೇಸ್ ದಾಖಲಿಸಲು ಶಿಫಾರಸ್ಸು ಮಾಡಿರುವುದನ್ನು ಹೋರಾಟಗಾರ ಎಂ.ಎಸ್.ಪಾಟೀಲ್ ಸ್ವಾಗತಿಸಿದ್ಧಾರೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು  ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net