

ಚಿಂತಾಮಣಿ: ಕಳವು ಪ್ರಕರಣಗಳನ್ನು ತಡೆಯಲು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ಸಿಸಿ ಕ್ಯಾಮರಾಗಳು ಸಹಕಾರಿಯಾಗಿದ್ದು, ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳು ವಂತೆ ಡಿವೈಎಸ್ಪಿ ಮುರಳಿಧರ್ ತಿಳಿಸಿದರು.
ನಗರದ ರಾಜೀವ್‌ನಗರ ಬಡಾವಣೆಯ ಸಿಟಿಜನ್ ವೆಲ್‌ೇರ್ ಅಸೋಸಿಯೇಷನ್ ಹಾಗೂ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬಡಾವಣೆಯ ವಿವೇಕಾನಂದ ಶಾಲೆಯ ಆವರಣದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಕಳವು ತಡೆಗಟ್ಟುವ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳವು ಪ್ರಕರಣಗಳಿಗೆ ಕಡಿವಾಣ ಹಾಕಲು ಹಾಗೂ ಸುರಕ್ಷಿತೆಗಾಗಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೆಕು. ಕುಟುಂಬ ಸಮೇತ ಮನೆಯಿಂದ ಹೊರಗೆ ಹೋಗುವಾಗ ಬೆಲೆ ಬಾಳುವ ವಸ್ತು, ಹಣವನ್ನು ಜತೆಯಲ್ಲಿ ಕೊಂಡೊಯ್ಯುವುದು ಅಥವಾ ಬ್ಯಾಂಕ್ ಲಾಕರ್‌ನಲ್ಲಿ ಇಡುವುದು ಸೂಕ್ತ. ಸಂಶಯಾಸ್ಪದ ವ್ಯಕ್ತಿ ಅಥವಾ ವಸ್ತುಗಳು ಕಂಡುಬಂದರೆ ಕೂಡಲೇ ಸಮೀಪದ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಬ್ಯಾಂಕ್‌ಗಳಲ್ಲಿ ಹಣ ಜಮಾ ಮಾಡುವಾಗ ಇಲ್ಲವೇ ಪಡೆಯುವಾಗ ನಿಮ್ಮ ಗಮನ ಬೇರೆಡೆ ಸೆಳೆದು ಹಣ ಲಪಟಾಯಿಸುವುದು, ಚಿನ್ನಾಭರಣಗಳನ್ನು ಪಾಲಿಷ್ ಮಾಡಿಕೊಡುವುದಾಗಿ ಮನೆ ಬಳಿ ಬರುವ ಅಪರಿಚತ ವ್ಯಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ತಿಳಿಸಿದರು.
ಪಿಐ ವಿಜಿಕುಮಾರ್, ಫೋರಂನ ಪದಾಧಿಕಾರಿಗಳಾದ ಶಂಕರರೆಡ್ಡಿ, ಈರುಳ್ಳಿ ಕೃಷ್ಣಾರೆಡ್ಡಿ, ಶಿಕ್ಷಕ, ಆಂಜನೇಯಪ್ಪ ಶ್ರೀನಿವಾಸರೆಡ್ಡಿ, ಅಗ್ರಿಗೋಲ್ಡ್ ಶ್ರೀನಿವಾಸ್, ವೆಂಕಟರೆಡ್ಡಿ, ಬಿಎಸ್‌ಎನ್‌ಎಲ್ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.