ತೊಡಿಕಾನದಲ್ಲಿ ದನ ಅಕ್ರಮ ಸಾಗಾಟ ಪತ್ತೆ

cow
Published on

ಸುಳ್ಯ: ತಾಲೂಕಿನ ತೊಡಿಕಾನ ಸಮೀಪ ಗೂಡ್ಸ್ ಟೆಂಪೋದಲ್ಲಿ ದನ ಅಕ್ರಮ ಸಾಗಾಟ ಆಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಾಗ ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ವಾಹನದಲ್ಲಿ ಎರಡು ದನಗಳಿದ್ದು, ಜಾನುವಾರು ಸಾಗಾಟದ ಬಗ್ಗೆ ಯಾವುದೇ ದಾಖಲೆ ಹೊಂದಿರಲಿಲ್ಲ ಎನ್ನಲಾಗಿದೆ. ಸುಳ್ಯ ಪೊಲೀಸರು ದನಸಾಗಾಟ ಮಾಡುತ್ತಿದ್ದವರನ್ನು ಮತ್ತು ವಾಹನವನ್ನು ಠಾಣೆಗೆ ತಂದು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net