ಸಾಮಾಜಿಕ ಸೇವೆಯಿಂದ ಅಭಿವೃದ್ಧಿ : ದಾಮೋದರ ನೆತ್ತರಕೆರೆ ಅಭಿಮತ

New Project (43)
Published on

ಬಂಟ್ವಾಳ: ಕ್ರೀಡೆ ಮೂಲಕ ಸಂಘಟನೆಯನ್ನು ಬಲಪಡಿಸಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಡು ಸಮಾಜದ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದು ನವೋದಯ ಮಿತ್ರ ಕಲಾ ವೃಂದ ಸಂಚಾಲಕ ದಾಮೋದರ ನೆತ್ತರಕೆರೆ ಹೇಳಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೆತ್ತರಕೆರೆ ನವೋದಯ ಮಿತ್ರ ಕಲಾ ವೃಂದ ಆಶ್ರಯದಲ್ಲಿ 3ನೇ ವರ್ಷದ ಸಂಘದ ಸದಸ್ಯರ ಕೂಡುವಿಕೆಯ ಎನ್‌ಎಂಸಿ ಪ್ರೀಮಿಯರ್ ಲೀಗ್-2025 ಕ್ರಿಕೆಟ್ ಪಂದ್ಯಾಟ ಭಾನುವಾರ ನೆತ್ತರಕೆರೆ ಲಚ್ಚಿಲ್ ಕ್ರೀಡಾಂಗಣದಲ್ಲಿ ನಡೆಯಿತು.

ನವೋದಯ ಮಿತ್ರ ಕಲಾ ವೃಂದ ಗೌರವಾಧ್ಯಕ್ಷ ಪಿ.ಸುಬ್ರಹ್ಮಣ್ಯ ರಾವ್, ಮಾಜಿ ಅಧ್ಯಕ್ಷ ಸುರೇಶ ಭಂಡಾರಿ ಅರ್ಬಿ, ಅಧ್ಯಕ್ಷ ಸಂತೋಷ ಕುಮಾರ್, ನವೋದಯ ಭಜನಾ ಮಂಡಳಿ ಮುಖ್ಯಸ್ಥ ವಿಶ್ವನಾಥ ಕುಲಾಲ್, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಯು.ಜಿ., ಶನಿ ಪೂಜಾ ಸೇವಾ ಸಮಿತಿ ಮಾಜಿ ಅಧ್ಯಕ್ಷ ಹೊನ್ನಪ್ಪ ಸುವರ್ಣ, ನೇತ್ರಾವತಿ ಮಾತೃ ಮಂಡಳಿ ಅಧ್ಯಕ್ಷೆ ಮಾಲತಿ ಚಂದ್ರಹಾಸ ಉಪಸ್ಥಿತರಿದ್ದರು. ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು. ದಿಲೀಪ್ ತುಂಬೆ ಸಹಕರಿಸಿದರು. ಎನ್‌ಎಂಸಿ ಟೈಗರ್ಸ್ ತಂಡ ಪ್ರಥಮ, ಎನ್‌ಎಂಸಿ ವಾರಿಯರ್ಸ್ ತಂಡ ದ್ವಿತೀಯ ಪ್ರಶಸ್ತಿ ಗೆದ್ದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net