ಈಸ್ಟರ್ ಹಬ್ಬದ ಪ್ರಯುಕ್ತ ಕ್ರಿಕೆಟ್ ಪಂದ್ಯ

ಈಸ್ಟರ್ ಹಬ್ಬದ ಪ್ರಯುಕ್ತ ಕ್ರಿಕೆಟ್ ಪಂದ್ಯ
Published on

ಸಿದ್ದಾಪುರ: ಈಸ್ಟರ್ ಹಬ್ಬದ ಪ್ರಯುಕ್ತ ಸಿದ್ದಾಪುರ ಸಂತ ಜೋಸೆಫರ ದೇವಾಲಯದ ಎಸ್‌ಜೆಸಿ ಕ್ರಿಕೆಟ್ ಸಂಘದ ವತಿಯಿಂದ ಸ್ಟೈಕರ್ಸ್ ಎಡ್ಜ್ ಟರ್ಫ್ ಮೈದಾನದಲ್ಲಿ ಐಪಿಎಲ್ ಮಾದರಿಯ ಈಸ್ಟರ್ ಕಪ್ ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಮಾಲ್ದಾರೆ ಫ್ರೆಂಡ್ಸ್ 11, ತಂಡದ ಮಹಿಳಾ ಆಟಗಾರ್ತಿ ಪ್ರಮೀಳಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸಹಕಾರಿಯಾಗಿದ್ದು, ಜತೆಗೆ ಸೌಹಾರ್ದತೆಗೆ ಸಹಕಾರಿಯಾಗಿದೆ ಎಂದರು.

ಕ್ರೀಡಾಕೂಟದಲ್ಲಿ ಐದು ತಂಡಗಳು ಭಾಗವಹಿಸಿದ್ದವು. ರದೀಶ್ ನಾಯಕತ್ವದ ಎಸ್‌ಜೆಸಿ ಕ್ಯಾಪಿಟಲ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಎಸ್‌ಜೆಸಿ ನೈಟ್ ರೈಡರ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಸರಣಿ ಶ್ರೇಷ್ಟ ಪ್ರಶಸ್ತಿ ಹಾಗೂ ಫೈನಲ್ ಪಂದ್ಯದಲ್ಲಿ ಉತ್ತಮ ಆಟಗಾರನಾಗಿ ಪ್ರಶಸ್ತಿಯನ್ನು ರದೀಶ್ ಪಡೆದುಕೊಂಡರು. ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಆಲ್ಬರ್ಟ್ ಪಡೆದುಕೊಂಡರು.

ಕ್ರೀಡಾಕೂಟದಲ್ಲಿ ಮಹಿಳಾ ಆಟಗಾರ್ತಿ ಟೀನೀ, ಜೋಯ್, ವಿಜು, ಜೋಸಿ, ವಿನ್ಸಿ, ತೋಮಸ್, ಸಾನಿಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net