

ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳಲ್ಲಿ ಟಿಕೆಟ್ ದಂಗಲ್ ಜೋರು
ಬಿರುಕಿನ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಸಿದ್ಧ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ತವರು ನೆಲದಲ್ಲೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಮೂಡಿದೆಯೇ? ಎರಡು ಪಕ್ಷಗಳಲ್ಲೂ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಈ ಪ್ರಶ್ನೆಗೆ ಪುಷ್ಟಿ ನೀಡಿವೆ.
ಹೌದು..., ಉಪಚುನಾವಣೆ ಹೊಸ್ತಿನಲ್ಲಿರುವ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳಲ್ಲಿ ಟಿಕೆಟ್ ದಂಗಲ್ ಜೋರಾಗಿದೆ. ತನ್ನ ಮಾಜಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ನಾಯಕ ಕುಮಾರಸ್ವಾಮಿ ಈಗಾಗಲೇ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಪೂರಕವೆಂಬಂತೆ ಖುದ್ದು ಕುಮಾರಸ್ವಾಮಿಯೇ ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ಉಪಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ತಂದೆಗೆ ಪುತ್ರ ನಿಖಿಲ್ ಸಾಥ್ ನೀಡುತ್ತಿದ್ದಾರೆ. ಈಗಾಗಲೇ ಜಿಪಂ ವ್ಯಾಪ್ತಿಯಲ್ಲಿ ಪದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿರುವ ಕುಮಾರಸ್ವಾಮಿ ಉಪಕದನಕ್ಕೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದ್ದಾರೆ. ಇದಕ್ಕೂ ಮೊದಲು ನಿಖಿಲ್ ಕುಮಾರಸ್ವಾಮಿ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ ಎನ್ನುವುದು ಸ್ಪಷ್ಟವಾಗತೊಡಗಿದೆ.
ಬಿಜೆಪಿಯಲ್ಲಿ ಅಸಮಾಧಾನ!
ಜೆಡಿಎಸ್ನಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಕ್ಷೇತ್ರದ ಬಿಜೆಪಿ ಪಾಳಯದಲ್ಲಿ ಅಸಮಾಧಾನದ ಬಿರುಗಾಳಿ ಎಬ್ಬಿಸಿದೆ. ಮೈತ್ರಿ ಪಕ್ಷವನ್ನು ಗಣನೆಗೆ ತೆಗೆದುಕೊಳ್ಳದೆ ಜೆಡಿಎಸ್ ವರಿಷ್ಠರು ಚುನಾವಣಾ ಸಂಬಂಧ ಸಭೆ ನಡೆಸುತ್ತಿರುವುದು ಬಿಜೆಪಿ ಪಾಳಯದ ಅಸಮಾಧಾನಕ್ಕೆ ಕಾರಣವಾಗಿದೆ. ಇದರೊಂದಿಗೆ, ಈ ಉಪಚುನಾವಣೆಯ ಮೂಲಕ ಪುನಃ ಕ್ಷೇತ್ರದಲ್ಲಿ ತನ್ನ ರಾಜಕೀಯ ಅಸ್ತಿತ್ವ ಕಾಣಬೇಕು ಎಂದು ಕನಸು ಹೊತ್ತಿದ್ದ ಪ್ರಬಲ ಟಿಕೆಟ್ ಆಕಾಂಕ್ಷಿ ಬಿಜೆಪಿ ನಾಯಕ ಸಿ.ಪಿ. ಯೋಗೇಶ್ವರ್ ಕೂಡ ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಅಸಮಾಧಾನ ಹೊತ್ತೇ ದೆಹಲಿಯ ಕಡೆಗೂ ಪಯಣ ಬೆಳೆಸಿದ್ದಾರೆ.
ಮೈತ್ರಿಯಲ್ಲಿ ಮಹಾಬಿರುಕು!
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೋಡೆತ್ತುಗಳಂತಿದ್ದ ಎರಡು ಪಗಳ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಭಿನ್ನರಾಗ ಆರಂಭಗೊಂಡಿದೆ. ನಮ್ಮ ಕ್ಷೇತ್ರವನ್ನು ನಾವೇ ಉಳಿಸಿಕೊಳ್ಳುತ್ತೇವೆ ಎನ್ನುವುದು ಜೆಡಿಎಸ್ ವಲಯದ ಮಾತಾದರೆ, ನಮ್ಮ ನಾಯಕರಿಗೆ ಮೋಸವಾಗುತ್ತಿದೆ ಎಂಬುದು ಕಮಲ ಪಾಳಯದ ದೂರಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಪರವಾಗಿ ಒಂದಾಗಿದ್ದ ಹೃದಯಗಳು ಈಗ ನಾನೊಂದು ತೀರ..., ನಿನೊಂದು ತೀರ ಎನ್ನುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಎರಡು ಪಕ್ಷಗಳ ಬಿರುಕಿನ ಚರ್ಚೆಗಳು ಜೋರಾಗಿವೆ.
ಪ್ರತ್ಯೇಕ ಸಭೆ ಬೀದಿಗೆ ಬಂತು ಬಿರುಕು!
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಗುರುವಾರ ೇತ್ರದಲ್ಲಿ ಪದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಹಮ್ಮಿಕೊಂಡಿದ್ದಾರೆ. ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ನಗರ ವ್ಯಾಪ್ತಿ ಸಭೆ ಹಾಗೂ ತಗಚಗೆರೆ ಗ್ರಾಮದಲ್ಲಿ ಹೊಂಗನೂರು ಜಿಪಂ ವ್ಯಾಪ್ತಿಯ ಸಭೆ ನಡೆಸಲಿದ್ದಾರೆ. ಅದೇದಿನ ಜಿಲ್ಲಾ ಬಿಜೆಪಿ ವತಿಯಿಂದ ತಾಲೂಕಿನ ಖಾಸಗಿ ಹೋಟೆಲ್ನಲ್ಲಿ ಪದ ಮುಖಂಡರ ಸಭೆ ಹಾಗೂ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಜೆಡಿಎಸ್ ಮೈತ್ರಿ ಪವಾದ ನಮ್ಮನ್ನು ಕಡೆಗಣಿಸಿ, ಏಕಪಯವಾಗಿ ಚುನಾವಣೆಗೆ ಸಜ್ಜಾಗುತ್ತಿರುವುದು ಕಮಲ ಪಾಳಯದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಕಾರ್ಯಕ್ರಮದ ದಿನವೇ ತಾವೂ ಪ್ರತ್ಯೇಕವಾಗಿ ಸಭೆ ಆಯೋಜಿಸಿದ್ದಾರೆ. ಗುರುವಾರ ನಡೆಯಲಿರುವ ಬಿಜೆಪಿ ಸಭೆ ತೀವ್ರ ಕುತೂಹಲ ಮೂಡಿಸಿದೆ. ಈ ಸಭೆಯತ್ತ ಎಲ್ಲರ ಚಿತ್ತ ಹರಿದಿದೆ.
ಕಾಂಗ್ರೆಸ್ ಕಿಲಕಿಲ!
ಮೈತ್ರಿ ಪಗಳಲ್ಲಿ ನಡೆಯುತ್ತಿರುವ ಈ ರಾಜಕೀಯ ವಿದ್ಯಮಾನಗಳು ಕಾಂಗ್ರೆಸ್ ವಲಯದ ಹರ್ಷಕ್ಕೆ ಕಾರಣವಾಗುತ್ತಿದೆ. ಎರಡು ಪಗಳಲ್ಲಿ ಆರಂಭಗೊಂಡಿರುವ ಬಿರುಕು ನಮಗೆ ಲಾಭ ತರಲಿದೆ ಎಂಬುದು ಕೈ ಲೆಕ್ಕಾಚಾರವಾಗಿದೆ. ಮೈತ್ರಿಯಲ್ಲಿನ ಬಿರುಕು ಶಮನವಾಗದಿದ್ದರೆ ಅದು ಸತ್ಯವೂ ಆಗುತ್ತದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿರುಕಿನ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಹವಣಿಸುತ್ತಿದೆ.