

ಸಿದ್ದಾಪುರ: ಇತ್ತೀಚೆಗೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ವಿರೋಧಿಸಿ ನೆಲ್ಯಹುದಿಕೇರಿಯಲ್ಲಿ ಸಿಪಿಐಎಂ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಕಾರ್ಪೊರೇಟ್ ಕಂಪನಿಗಳ ಪರವಾಗಿ ಬಜೆಟ್ ರೂಪಿಸುವ ಮೂಲಕ ಜನಸಾಮಾನ್ಯರಿಗೆ ದ್ರೋಹ ಉಂಟು ಮಾಡಲಾಗಿದೆ ಎಂದು ಸಿಪಿಐಎಂನ ಪ್ರಮುಖ ಪಿ.ಆರ್. ಭರತ್ ಆರೋಪಿಸಿದರು.
ಜಿಲ್ಲಾ ಸಮಿತಿಯ ಪ್ರಮುಖ ಎಚ್.ಬಿ. ರಮೇಶ್ ಮಾತನಾಡಿ, ರೈತ ವಿರೋಧಿ, ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಕಾರ್ಪೊರೇಟ್ ಕಂಪನಿಗಳ ಪರವಾಗಿದ್ದು, ಜನ ಸಾಮಾನ್ಯರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.