ಬಾವಿಗೆ ಬಿದ್ದಿದ್ದ ಹಸು ರಕ್ಷಣೆ

16kmt2_Jyeshtapur
Published on

ಕುಮಟಾ: ನಿರ್ಮಾಣ ಹಂತದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ನರಳಾಡುತ್ತಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನಪಟ್ಟು ಸುರಕ್ಷಿತವಾಗಿ ಮೇಲಕ್ಕೆತ್ತಿದ ಘಟನೆ ತಾಲೂಕಿನ ಬಾಡದ ಜ್ಯೇಷ್ಠಾಪುರದಲ್ಲಿ ಶುಕ್ರವಾರ ನಡೆದಿದೆ.

ಬಾಡ ಪಂಚಾಯಿತಿ ವ್ಯಾಪ್ತಿಯ ಜ್ಯೇಷ್ಠಾಪುರದಲ್ಲಿ ಸ್ಥಳೀಯರ ನಿರ್ಮಾಣ ಹಂತದ ತೆರೆದ ಬಾವಿಗೆ ಹಸುವೊಂದು ಕಾಲು ಜಾರಿ ಬಿದ್ದಿತ್ತು. ಸುಮಾರು 25 ಅಡಿಗೂ ಹೆಚ್ಚು ಆಳದ ಬಾವಿಯಲ್ಲಿ ಹಸು ಬಿದ್ದಿದ್ದರಿಂದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಬಾವಿಯಿಂದ ಹಸುವನ್ನು ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆ ಎತ್ತಿದರು. ಈ ವೇಳೆ ಅಗ್ನಿಶಾಮಕ ಠಾಣಾಧಿಕಾರಿ ಟಿ.ಎನ್. ಗೊಂಡ, ಸಿಬ್ಬಂದಿ ಕುಮಾರ ಗೌಡ, ದಿನೇಶಕುಮಾರ, ಪ್ರಮೋದ ಪಟಗಾರ, ಅಜಯ ನಾಯ್ಕ, ಮಹೇಶ ಶೆಟ್ಟಿ. ರಾಜೇಶ ಮಡಿವಾಳ ಇನ್ನಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net