Cow slaughter: ಮುಸ್ಲಿಂ ಸಮುದಾಯ ಗೋ ಕಳ್ಳತನ ಬೆಂಬಲಿಸದು, ತನಿಖೆಗೆ ಸಹಕರಿಸುತ್ತೇವೆ: ತ೦ಜೀಂ

Cow slaughter
Published on

ಕಾರವಾರ: ಹೊನ್ನಾವರದಲ್ಲಿ ಗರ್ಭ ಧರಿಸಿದ ಹಸುವಿನ ತಲೆ ಕಡಿದ ಪ್ರಕರಣವನ್ನು(Cow slaughter) ನಾವು ಖಂಡಿಸುತ್ತೇವೆ ಮತ್ತು ತನಿಖೆಗೆ ಪೊಲೀಸರಿಗೆ ಸಹಕಾರ ನೀಡುತ್ತೇವೆ ಎಂದು ಭಟ್ಕಳ ತಂಜಿಂ ಸಂಸ್ಥೆಯ ಅಧ್ಯಕ್ಷ ಇನಾಯತ್-ಉಲ್ಲಾ ಷಾಬಂದ್ರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಮುಸ್ಲೀಂ ಧರ್ಮದವರು ಗೋಮಾಂಸ ತಿನ್ನುತ್ತಾರೆ ನಿಜ. ಆದರೆ, ಕಳ್ಳತನ ಮಾಡಿದ ಮಾಂಸವನ್ನು ಸೇವಿಸುವುದಕ್ಕೆ ಇಸ್ಮಾಂ ಧರ್ಮದಲ್ಲಿ ನಿಷೇಧವಿದೆ.

ಹಿಂದೆ ಜಾನುವಾರು ಕಳ್ಳತನ ಹೆಚ್ಚಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದಾಗ ನಾವು 1 ತಿಂಗಳು ಭಟ್ಕಳದಲ್ಲಿ ಮಾಂಸದ ಅಂಗಡಿಗಳನ್ನು ಬಂದ್ ಇಟ್ಟಿದ್ದೆವು. ಭಟ್ಕಳದ ಮುಸ್ಲೀಮರು ಯಾವುದೇ ಕಾರಣಕ್ಕೂ ದನ ಕಳ್ಳತನ ಪ್ರಕರಣವನ್ನು ಸಹಿಸುವುದಿಲ್ಲ . ಯಾವುದೇ ಧರ್ಮದವರು ಇದ್ದರೂ ಅವರಿಗೆ ಶಿಕ್ಷೆ ಆಗಬೇಕು ಎಂದರು.

Cow slaughter ಬಂಧನಕ್ಕೆ ಸಹಕಾರ

ಹೊನ್ನಾವರ ಸಾಲ್ಕೋಡಿನಲ್ಲಿ ಗರ್ಭ ಧರಿಸಿದ ಹಸುವಿನ ತಲೆ ಕಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರನ್ನು ಬಂಽಸಬೇಕಿದೆ. ಆರೋಪಿಗಳು ಯಾರೇ ಆಗಿದ್ದರೂ ಅವರನ್ನು ಬಂಧಿಸಲು ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಬಂಧಿತ ಆರೋಪಿಗಳ ಹೆಸರಿನ ನಂತರ ಭಟ್ಕಳ ಎಂಬ ಹೆಸರು ಸೇರ್ಪಡೆಯಾಗಿದ್ದು, ಇದರಿಂದ ಭಟ್ಕಳದ ಹೆಸರು ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದನ ಕಳ್ಳತನ ಪ್ರಕರಣ ಜಿಲ್ಲೆಯಲ್ಲಿ ಇದೇ ಮೊದಲು ನಡೆಯುತ್ತಿಲ್ಲ. ಹಿಂದೆ ಬಿಜೆಪಿ ಸರ್ಕಾರದ ಅವಽಯಲ್ಲೂ ನಡೆದಿತ್ತು. ಆದರೆ, ಬಿಜೆಪಿ ಶಾಸಕ ದಿನಕರ ಶೆಟ್ಟಿ ಅವರು ಸಿಎಂ ಹಾಗೂ ಗೃಹ ಸಚಿವರ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದಾರೆ. ದಿನಕರ ಶೆಟ್ಟಿ ಅವರು ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು. ಅಬ್ದುಲ್ ರಖಿಬ್ ಸುದ್ದಿಗೋಷ್ಠಿಯಲ್ಲಿದ್ದರು.

Cow slaughter ಹಲ್ಲೆ ಮಾಡಿದ್ದಕ್ಕೆ ಗುಂಡು ಹಾರಿಸಬೇಕಾಯ್ತು

ದನ ಕಳ್ಳತನ ಆರೋಪಿಗಳ ಕಾಲಿಗೆ ಗುಂಡು ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಭಟ್ಕಳ ಮುಸ್ಲೀಂ ಮುಖಂಡ ಇಮ್ರಾನ್ ಲಂಕಾ, ಪ್ರಕರಣದಲ್ಲಿ ಆರೋಪಿಗಳು ಹಾಗೂ ಪೊಲೀಸರು ಇಬ್ಬರದ್ದೂ ತಪ್ಪಿದೆ. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಕ್ಕೆ ಅವರು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net