Arrest : 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖತರ್ನಾಕ್‌ ಕಳ್ಳ ಅಂದರ್‌

Arrest
Published on

ಭಟ್ಕಳ: ನ್ಯಾಯಾಲಯಕ್ಕೆ ಹಾಜರಾಗದೇ 3 ವರ್ಷಗಳಿಂದ ತಲೆ ಮರೆಸಿಕೊಂಡಿದ್ದವನನ್ನು ಭಟ್ಕಳ ಶಹರ ಠಾಣೆ ಪೊಲೀಸರು ಬಂಧಿಸಿ(Arrest) ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಖಾರಿಪುರ ತಾಲೂಕಿನ ಫಾರುಕ್ ಭೋಗಿಬಾಷಾ ಬಂಧಿತ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಜಾನುವಾರು ಕಳ್ಳತನ,ಸಿದ್ದಾಪುರ ಠಾಣೆಯಲ್ಲಿ ಮಂದಿರ ಕಳ್ಳತನ, ಶಿವಮೊಗ್ಗ ಜಿಲ್ಲೆಯ ಹೊಸನಗರ,ದೊಡ್ಡಪೇಟೆ,ಶಿರಾಳಕೊಪ್ಪ,ಹಿರೆಕೆರೂರು,ಸೊರಬ, ತೀರ್ಥಹಳ್ಳಿ ಶಿಕಾರಿಪುರ, ಪೊಲೀಸ್ ಠಾಣೆಗಳಲ್ಲಿ ಒಟ್ಟು 15 ಕ್ಕೂ ಹೆಚ್ಚು ಪ್ರಕರಣಗಳಿವೆ.

Arrest

ಈತನ ವಿರುದ್ಧ ಭಟ್ಕಳ ಜೆಎಂಎಫ್‌ಸಿ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆತ ಮುರ್ಡೇಶ್ವರ ಓಲಗ ಮಂಟಪ ಬಳಿ ಆತನನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಭಟ್ಕಳ ಶಹರ ಇನ್ಸ್ಪೆಕ್ಟರ್ ಗೋಪಿಕೃಷ್ಣ.ಕೇ.ಆರ್.ಪಿಎಸ್‌ಐ ನವೀನ್ ಎಸ್. ನಾಯ್ಕ, ಎಚ್‌ಸಿ ಜೈರಾಮ ಹೊಸ್ಕಟ್ಟಾ, ಉದಯ ನಾಯ್ಕ,ಮುರ್ಡೇಶ್ವರ ಠಾಣೆಯ ಸುರೇಶ ದೇವಾಡಿಗ ಮತ್ತು ಪಿಸಿ ಕಾಶಿನಾಥ ಕೊಟಗುಣಶಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net