ಹುಲಿ ದಾಳಿಗೆ ಹಸು ಬಲಿ

TIGER ATTACK
Published on

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ ಬುಧವಾರ ಮನೆಯ ಸಮೀಪವೇ ಮೇಯಲು ಬಿಟ್ಟಿದ್ದ ಹಾಲು ಕರೆಯುವ ಹಸುವಿನ ಮೇಲೆ ಹಾಡಹಗಲೇ ಹುಲಿಯೊಂದು ದಾಳಿ ಮಾಡಿ ಬಲಿ ತೆಗೆದುಕೊಂಡಿದೆ.

ಗ್ರಾಮದ ನಿವಾಸಿ ಜಾನ್ ಫಿಲೋಮಿನಾ ಅವರು ಮನೆಯ ಬಳಿಯ ಗದ್ದೆಯಲ್ಲಿ ಹಸುವನ್ನು ಮೇಯಲು ಕಟ್ಟಿದ್ದರು. ಮಧ್ಯಾಹ್ನದ ಸಮಯದಲ್ಲಿ ಹಸುವಿನ ಬಳಿ ತೆರಳಿದಾಗ ಅದು ಸಾವಿಗೀಡಾಗಿರುವುದು ಕಂಡು ಬಂದಿದೆ. ಹಸುವಿನ ಬಳಿ ನೋಡಿದಾಗ ಹಸುವಿನ ಕುತ್ತಿಗೆಯ ಬಳಿ ಗಂಭೀರ ಗಾಯವಾಗಿರುವ ಗುರುತು ಪತ್ತೆಯಾಗಿದೆ. ಹುಲಿ ದಾಳಿ ನಡೆಸಿ ಹಸುವನ್ನು ಸಾಯಿಸಿದೆ.

ಸ್ಥಳಕ್ಕೆ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಶಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿಯ ಚಲನವಲನ ಪರಿಶೀಲಿಸಲು ಕ್ಯಾಮರಾ ಟ್ರಾೃಪ್ ಅಳವಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net