ಹಾವು ಕಚ್ಚಿ ಹಸು ಸಾವು

ಹಾವು ಕಚ್ಚಿ ಹಸು ಸಾವು
Published on

ನಾಪೋಕ್ಲು: ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಹಸು ಸಾವನ್ನಪ್ಪಿದ ಪ್ರಕರಣ ಶುಕ್ರವಾರ ಕೈಕಾಡು ಗ್ರಾಮದಲ್ಲಿ ನಡೆದಿದೆ.

ಇಲ್ಲಿಗೆ ಸಮೀಪದ ಕೈಕಾಡು ಗ್ರಾಮದ ಬೊಳ್ಳಂಡ ಸುಬ್ಬಯ್ಯ ಎಂಬುವರು ಹಸುವನ್ನು ಗದ್ದೆಯಲ್ಲಿ ಮೇಯಲು ಕಟ್ಟಿದ್ದರು. ಸಂಜೆ ಎಂದಿನಂತೆ ಹಸುವನ್ನು ಕರೆತರಲು ಹೋದಾಗ ಹಸು ಸಾವನಪ್ಪಿರುವುದು ಗೋಚರಿಸಿದೆ. ಪಾರಾಣೆ ಪಶುವೈದ್ಯಾಧಿಕಾರಿ ಲತಾ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹಾವು ಕಚ್ಚಿ ಹಸು ಸಾವನಪ್ಪಿರಬಹುದೆಂದು ಅಂದಾಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net