ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

death
Published on

ಮಂಡ್ಯ: ತಾನೇ ಸಾಕಿದ್ದ ಹಸು ಮುಂದೊಂದ್ದು ದಿನ ತನ್ನನ್ನೇ ಕೊಲ್ಲಬಹುದು ಎಂದು ಆ ಬಾಲಕ ಕನಸ್ಸಿನಲ್ಲೂ ಯೋಚಿಸಿರಲಿಲ್ಲ. ಆದರೆ ವಿಧಿಲಿಖಿತ ಅದೇ ಆಗಿತ್ತು. ಆ ಹಸುವಿನಿಂದಲೇ ಬಾಲಕ ಪ್ರಾಣಬಿಟ್ಟಿದ್ದಾನೆ.

ಇಂತಹದ್ದೊಂದು ಮನಕಲಕುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಯತ್ತಂಬಾಡಿ ಗ್ರಾಮದಲ್ಲಿ ಸಂಭವಿಸಿದ್ದು, 13 ವರ್ಷದ ಬಾಲಕ ಮಾದೇಶ್ (13) ಬಲಿಯಾಗಿದ್ದಾನೆ. ಇದನ್ನೂ ಓದಿರಿ ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಸೋಮವಾರ ರಾತ್ರಿ ಹಸುವಿಗೆ ಹುಲ್ಲು ಹಾಕಲು ಹೋಗಿದ್ದ ಮಾದೇಶ್​ಗೆ ಕೊಂಬಿನಿಂದ ತಿವಿದಿದೆ. ಮಾರಣಾಂತಿಕವಾಗಿ ಗಾಯಗೊಂಡ ಬಾಲಕ ತೀವ್ರ ರಕ್ತಸ್ರಾವವಾಗಿ ಅಸುನೀಗಿದ್ದಾನೆ.

ಮನೆಯಲ್ಲೇ ಸಾಕಿದ್ದ ಹಸುಗೆ ಮನೆಮಗ ಬಲಿಯಾಗಿರುವುದು ಇಡೀ ಕುಟುಂಬವನ್ನು ಶೋಕದಲ್ಲಿ ಮುಳುಗಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net