COVID19 : ಶಾಸಕ ವೀರಣ್ಣ ಚರಂತಿಮಠ ಅವರಿಗೆ ಫೋನ್ ಮಾಡಿದ ಸಿಎಂ ಬಿಎಸ್​ವೈ

veeranna charantimath
Published on

ಬಾಗಲಕೋಟೆ: ಕರೊನಾ ಸೋಂಕು ಹರಡುವಿಕೆಯ ವಿಚಾರದಲ್ಲಿ ಬಾಗಲಕೋಟೆ ಹಾಟ್​ಸ್ಪಾಟ್ ಎನಿಸಿಕೊಂಡಿದೆ. ನಗರದಲ್ಲೇ 11 ಜನರಿಗೆ ಸೋಂಕು ಪತ್ತೆಯಾಗಿದ್ದು, ಈ ಕುರಿತಾಗಿ ಶಾಸಕ ವೀರಣ್ಣ ಚರಂತಿ ಮಠ ಅವರಿಗೆ ಸಿಎಂ ಬಿಎಸ್​ ಯಡಿಯೂರಪ್ಪ ಅವರು ದೂರವಾಣಿ ಕರೆ ಮಾಡಿದ್ದರು. ಜಿಲ್ಲೆಯ ಸ್ಥಿತಿಗತಿ ಕುರಿತ ವಿಚಾರಗಳನ್ನು ಅವರ ಜತೆಗೆ ಚರ್ಚಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 14 ಜನರಿಗೆ ಕರೊನಾ ಸೋಂಕು ಪಾಸಿಟಿವ್ ಆಗಿದ್ದು, ಒಂದು ಸಾವು ಸಂಭವಿಸಿದೆ. ಬಾಗಲಕೋಟೆ ನಗರದಲ್ಲಿ 11, ಮುಧೋಳ ತಾಲೂಕಿನಲ್ಲಿ 3 ಪ್ರಕರಣಗಳಿವೆ. ಆದಾಗ್ಯೂ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಶಾಸಕ ಚರಂತಿಮಠ ಅವರು ಸಿಎಂಗೆ ಮಾಹಿತಿ ನೀಡಿದ್ದಾರೆ.

ಬಾಗಲಕೋಟೆ ನಗರದಲ್ಲಿ ಒಂದೇ ಪ್ರದೇಶದಲ್ಲಿ ಸೋಂಕು ಪತ್ತೆಯಾಗಿದ್ದು, ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಉಳಿದಂತೆ ಲಾಕ್​ಡೌನ್ ನಿಯಮ ಪಾಲನೆ, ಕ್ವಾರಂಟೈನ್ ಎಲ್ಲದರ ಮೇಲೂ ಜಿಲ್ಲಾಡಳಿತ ನಿಗಾವಹಿಸಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net