More

    ಒಂದೇ ಒಂದು ಆ್ಯಪಲ್​ – 2 ಕೋಟಿ ಪರಿಹಾರ!

    ಬೀಜಿಂಗ್​: ಒಂದೇ ಒಂದು ಆ್ಯಪಲ್​! ಅದರಿಂದಾಗಿ ಆಯಿತು ಬಹುದೊಡ್ಡ ಅನಾಹುತ. ಪರಿಣಾಮ ಏನು ಗೊತ್ತ ? – ಆ ಆ್ಯಪಲ್ ಹಿಡಿದುಕೊಂಡಿದ್ದ ಬಾಲಕಿಯ ಪಾಲಕರು ಬರೋಬ್ಬರಿ 2 ಕೋಟಿಗೂ ಅಧಿಕ ರೂಪಾಯಿ ಪರಿಹಾರ ನೀಡಬೇಕಾಗಿ ಬಂತು! ಅಂಥದ್ದೇನಾಯಿತು ಅನಾಹುತ ಅಂತೀರಾ ಮುಂದೆ ಓದಿ..

    ಚೀನಾದ ಡಾಂಗುವಾನ್​ ನಲ್ಲಿ 2018ರಲ್ಲಿ ಮಾರ್ಚ್​ನಲ್ಲಿ ನಡೆದ ಘಟನೆ ಇದು. ಕೋರ್ಟ್​ ತೀರ್ಪು ಇತ್ತೀಚೆಗಷ್ಟೇ ಬಂದಿದ್ದು, ಅದರಂತೆ ಸಾಂದರ್ಭಿಕ ಸಾಕ್ಷಿಯ ಪ್ರಕಾರ 11 ವರ್ಷದ ಬಾಲಕಿಯೊಬ್ಬಳು ಅಪರಾಧಿ ಎಂದು ಸಾಬೀತಾಯಿತು. ಪರಿಣಾಮ ಆಕೆಯ ಪಾಲಕರು 2 ಕೋಟಿ ರೂಪಾಯಿಗೂ ಅಧಿಕ ಪರಿಹಾರ ನೀಡಬೇಕಾಯಿತು. ಈ ಘಟನೆ ನಡೆದು ಎರಡು ವರ್ಷವಾಗಿದ್ದು, ಅದರ ವಿವರ ಹೀಗಿದೆ –
    ಡಾಂಗುವಾನ್​ನಲ್ಲಿ ಬಹುಮಹಡಿ ಅಪಾರ್ಟ್​ಮೆಂಟ್​ ಒಂದರ 24ನೇ ಮಹಡಿಯಲ್ಲಿ ಬಾಲಕಿಯೊಬ್ಬಳು ತಮ್ಮ ಮನೆಯಲ್ಲಿದ್ದ ನಾಯಿಗೆ ಆಹಾರ ಕೊಡ್ತಾ ಇದ್ದಳು. ನಾಯಿ ಬಾಲ್ಕನಿಯ ಮೂಲೆಗಿತ್ತು. ಅಲ್ಲೇ ಹೋಗಿ ಬಾಲಕಿ ಈ ಕೆಲಸ ಮಾಡ್ತಾ ಇದ್ದಳು. ಆಗ ಆಕೆಯ ಕೈಯಲ್ಲೊಂದು ಆ್ಯಪಲ್ ಇತ್ತು. ನಾಯಿಗೆ ಆಹಾರ ಹಾಕುವ ಗಡಿಬಿಡಿಗೆ ಬಾಲಕಿಯ ಕೈಯಲ್ಲಿದ್ದ ಆ್ಯಪಲ್​ ಹಿಡಿತ ತಪ್ಪಿತ್ತು. ಬಾಲ್ಕನಿಯಿಂದ ನೇರವಾಗಿ ಕೆಳಕ್ಕೆ ಬೀಳ್ತಾ ಹೋಯಿತು.. ಆತಂಕದಿಂದ ಬಾಲಕಿ ಬಾಲ್ಕನಿಯಿಂದಲೇ ಕೆಳಕ್ಕೆ ನೋಡ್ತಾ ಇದ್ದಳು. ಆ ಆ್ಯಪಲ್ ರಭಸವಾಗಿ ಬೀಳ್ತಾ ಇತ್ತು..

    ಕೆಳಗೆ ಬೀದಿಯಲ್ಲಿ ಅದೇ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ಅಜ್ಜಿಯೊಬ್ಬರು ತಮ್ಮ ಮೂರು ತಿಂಗಳ ಮೊಮ್ಮೊಗಳನ್ನು ಟಾಂಗ್​ಟಾಂಗ್​ನಲ್ಲಿ ಕುಳ್ಳಿರಿಸಿಕೊಂಡು ತಳ್ಳುತ್ತಾ ಹೋಗುತ್ತಿದ್ದರು. ಆ ಆ್ಯಪಲ್​ ನೇರವಾಗಿ ಬಿದ್ದುದು ಎಲ್ಲಿಗೆ ಗೊತ್ತ? ಆ ಪುಟಾಣಿ ಕೂಸಿನ ತಲೆಗೇ! ಮೂರು ತಿಂಗಳ ಹಸುಗೂಸು ಆ ಏಟು ತಡೆದುಕೊಳ್ಳಲಿಲ್ಲ. ಅದರ ಅರಿವು ತಪ್ಪಿತು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದರು. ತಲೆಗೆ ಗಂಭೀರ ಗಾಯವಾಗಿದ್ದು, ಬುರುಡೆ ಒಡೆದಿದೆ. ಮಿದುಳಿಗೆ ಆಘಾತವಾಗಿದೆ ಎಂದು ಆಸ್ಪತ್ರೆಗೆ ದಾಖಲಿಸಿಕೊಂಡರು.

    ಆ ಮಗುವಿನ ಬಲಬದಿಯ ಮಿದುಳು ಸಂಪೂರ್ಣ ನಿಷ್ಕ್ರಿಯವಾಗಿದೆ ಎಂಬ ವರದಿಯೂ ಹೊರಬಿತ್ತು. ಇದು ಪೊಲೀಸ್ ಕೇಸ್​ ಕೂಡ ಆಯಿತು. ತನಿಖೆ ಕೂಡ ಶುರುವಾಯಿತು. ಘಟನೆಗೆ ಕಾರಣವಾಗಿದ್ದು ಆ್ಯಪಲ್ ಎಂಬ ಅಂಶ ಬೆಳಕಿಗೆ ಬಂತು. ಸಾಕ್ಷಿಯಾಗಿ ಆ್ಯಪಲ್ ಕೂಡ ಸಿಕ್ಕಿತು. ಅದನ್ನು ಡಿಎನ್​ಎ ಪರೀಕ್ಷೆಗೆ ಕಳುಹಿಸಿಕೊಟ್ರು. ಅಲ್ಲಿ ಸಿಕ್ಕ ಡಿಎನ್​ಎ ಅಂಶ ಮುಂದಿಟ್ಟುಕೊಂಡು ಪೊಲೀಸರು ವಿಚಾರಣೆ ಶುರುಮಾಡಿದ್ರು. ಆಗ ಆ್ಯಪಲ್ ಹಿಡಿದುಕೊಂಡಿದ್ದ ಹನ್ನೊಂದು ವರ್ಷದ ಬಾಲಕಿಯ ವಿಚಾರ ಮುನ್ನೆಲೆಗೆ ಬಂತು. ಅಲ್ಲದೇ, ಆಕೆಯ ಡಿಎನ್​ಎ ಮತ್ತು ಆ್ಯಪಲ್ ಮೇಲಿದ್ದ ಡಿಎನ್​ಎ ಹೊಂದಿಕೆಯಾಯಿತು. ಆಕೆ ಆರೋಪಿ ಎಂಬ ತೀರ್ಮಾನಕ್ಕೆ ಬಂದ್ರು ಪೊಲೀಸರು.

    ಘಟನೆ ನಡೆದ ಸಂದರ್ಭದಲ್ಲಿ ಅಪಾರ್ಟ್​ಮೆಂಟ್​ನಲ್ಲಿ ಬಾಲಕಿ ಒಬ್ಳೇ ಇದ್ದಳು. ಆಕಸ್ಮಿಕವಾಗಿ ನಡೆದ ಘಟನೆ ಇದು ಎಂಬುದನ್ನು ಹೇಳಿದರೂ ಅದಾವುದೂ ಪರಿಗಣಿಸಲ್ಪಡಲಿಲ್ಲ. ಹಸುಗೂಸಿನ ಚಿಕಿತ್ಸೆಯ ವೆಚ್ಚ ಮತ್ತು ಆ ಕ್ಷಣಕ್ಕೆ ಈ ಬಾಲಕಿಯ ಪಾಲಕರು 20 ಲಕ್ಷ ರೂಪಾಯಿ ನೆರವು ನೀಡಿದ್ದರು. ಆದಾಗ್ಯೂ ಕೇಸ್ ಮುಂದುವರಿಯಿತು. ಇದೀಗ ಎರಡು ವರ್ಷಗಳ ಬಳಿಕ ಕೋರ್ಟ್​ ಈ ಬಾಲಕಿಯ ಪಾಲಕರಿಗೆ ಆ ಹಸುಗೂಸಿನ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಇದು ಈಗ ಅಲ್ಲಿನ ಸೋಷಿಯಲ್ ಮೀಡಿಯಾದಲ್ಲಿ ಬಹುಚರ್ಚಿತ ವಿಚಾರ. (ಏಜೆನ್ಸೀಸ್)

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಈ ವ್ಯಕ್ತಿಯ ದುರಾದೃಷ್ಟ ನೋಡಿ! – ಒಂದಿಲ್ಲೊಂದು ಕಾರಣಕ್ಕೆ ಕ್ವಾರಂಟೈನ್ ಅವಧಿ ವಿಸ್ತರಣೆಯಾಗ್ತಾ ಹೋಯಿತು..

    ಸೆನ್ಸೆಕ್ಸ್​ 600 ಅಂಶ ಕುಸಿತ, ನಿಫ್ಟಿ 9,000 ಅಂಶಕ್ಕಿಂತ ಕೆಳಕ್ಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts