

ಬೆಂಗಳೂರು: ಸೆಪ್ಟೆಂಬರ್ 21 ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳುವ ವರಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ.
ಮಂತ್ರಿಗಳು, ಶಾಸಕರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಕೋವಿಡ್ ಟೆಸ್ಟ್ ನ ಪ್ರಮಾಣ ಪತ್ರದೊಂದಿಗೆ ಅಧಿವೇಶನಕ್ಕೆ ಬರುವುದು ಕಡ್ಡಾಯಗೊಳಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಅಧಿವೇಶನಕ್ಕೆ 72ತಾಸಿನ ಮುನ್ನ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಿರುವ ಅವರು, ಕಲಾಪ ನಡೆಯುವ ವೇಳೆ ಆಸನ ವ್ಯವಸ್ಥೆಯಲ್ಲಿ ಸುರಕ್ಷತಾ ಕ್ರಮ ಸೇರಿ ವಿವಿಧ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ವಿವರಿಸಿದರು.
ಹಾಗೇ ಪತ್ರಕರ್ತರ ಗ್ಯಾಲರಿಯಲ್ಲಿ 15 ಮಂದಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಉಳಿದವರಿಗೆ ಮೊದಲ ಮಹಡಿಯ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಪತ್ರಕರ್ತರು, ಅಧಿಕಾರಿಗಳು, ಸಚಿವಾಲಯ ಸಿಬ್ಬಂದಿಗೆ ಕೊವಿಡ್-19 ತಪಾಸಣೆ ಕಡ್ಡಾಯ. ಯಾರಾದರೂ ಮಾಡಿಸಿಕೊಂಡು ಬಾರದೆ ಇದ್ದರೆ, ಅಂಥವರಿಗೆ ವಿಧಾನಸೌಧದಲ್ಲೇ ಟೆಸ್ಟ್ ಮಾಡುವುದಾಗಿ ಹೇಳಿದ್ದಾರೆ.