ಪ್ರತಿನಿತ್ಯ ಉದ್ಯೋಗ, ವ್ಯಾಪಾರ, ವ್ಯವಹಾರ, ಸಭೆ- ಸಮಾರಂಭ, ಅಗತ್ಯ ಸೇವೆ ಆಧಾರದಲ್ಲಿ ಮನೆಯಿಂದ ಹೊರಗೆ ಬರುವ ಪುರುಷರೇ ಅಧಿಕವಾಗಿ ಮೃತಪಟ್ಟಿದ್ದಾರೆ. ಈವರೆಗೆ ಸೋಂಕಿನಿಂದ ಮೃತಪಟ್ಟವರಲ್ಲಿ 4,292 (ಶೇ.66) ಮಂದಿ ಪುರುಷರಾಗಿದ್ದಾರೆ. ಇನ್ನು ಸೋಂಕಿತರ ಸಂಪರ್ಕಕ್ಕೆ ಬಂದ ಮಹಿಳೆಯರು ಕೇವಲ 2,225 (ಶೇ.34) ಜನರು ಸಾವಿಗೀಡಾಗಿದ್ದಾರೆ. ರಾಜಧಾನಿಯಲ್ಲಿ ಈವರೆಗೆ 7.97 ಲಕ್ಷ ಜನರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಈ ಪೈಕಿ 4.85 ಲಕ್ಷ ಪುರುಷರು, 3.11 ಲಕ್ಷ ಮಹಿಳೆಯರು ಮತ್ತು 89 ಮಂದಿ ತೃತೀಯ ಲಿಂಗಿಗಳಿದ್ದಾರೆ. 20 ರಿಂದ 40 ವರ್ಷದೊಳಗಿನ ಶೇ.36 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಮಾರ್ಚ್ನಲ್ಲಿ ಶೇ.94 ಇದ್ದ ಗುಣಮುಖರ ಪ್ರಮಾಣ ಈಗ ಶೇ.64ಕ್ಕೆ ಇಳಿಮುಖವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2.81 ಲಕ್ಷಕ್ಕೆ ಏರಿಕೆಯಾಗಿದೆ.