

*ನಾಲ್ಕು ಸದಸ್ಯರ ಗೌಪ್ಯ ಮತದಾನ
*ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಕೆ ನಂತರ ರಿಸಲ್ಟ್ ಪ್ರಕಟ
ಮಾಗಡಿ
ಮಾಗಡಿ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆ ಮಂಗಳವಾರ ನಿಗದಿಯಂತೆ ನಡೆಯಿತಾದರೂ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಫಲಿತಾಂಶ ಘೋಷಣೆ ಮಾಡಿಲ್ಲ.
ರಮ್ಯಾ ನರಸಿಂಹಮೂರ್ತಿ ರಾಜೀನಾಮೆಯಿಂದ ತೆರವಾದ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್‌ನಿಂದ ಶಿವರುದ್ರಮ್ಮ ವಿಜಯ್ ಕುವಾರ್, ಜೆಡಿಎಸ್‌ನಿಂದ ರೇಖಾ ನವೀನ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಜೆಡಿಎಸ್‌ನ ರೇಖಾ 6 ಮತ ಪಡೆದರೆ, ಶಿವರುದ್ರಮ್ಮ 13 ಮತ ಪಡೆದರು. ಆದರೆ, ನಾಲ್ಕು ಸದಸ್ಯರು ಗೌಪ್ಯ ಮತದಾನ ಮಾಡುವಂತೆ ಹೈ ಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಶರತ್ ಕುವಾರ್ ಲಿತಾಂಶ ೋಷಣೆ ಮಾಡಲಿಲ್ಲ.
ಈ ಕುರಿತು ಬುಧವಾರ ಹೈ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಕೆ ನಂತರ ಫಲಿತಾಂಶವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಆದರೆ, ಹೆಚ್ಚು ಮತ ಪಡೆದ ಶಿವರುದ್ರಮ್ಮ ವಿಜಯ್ ಕುವಾರ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಸಂಭ್ರಮಿಸಿದರು.
ಕಳೆದ ಬಾರಿ ಅಧ್ಯಕ್ಷರ ಚುನಾವಣೆ ವೇಳೆ ಜೆಡಿಎಸ್‌ನ ಸದಸ್ಯರಾದ ಹೇಮಲತಾ ನಾಗರಾಜು, ವೆಂಕಟರಾಮು, ಕೆ.ಕೆ.ಕಾಂತರಾಜು, ರೆಹಮತ್ ವಿಫ್ ಉಲ್ಲಂನೆ ವಾಡಿ ಕಾಂಗ್ರೆಸ್‌ನ ರಮ್ಯಾ ನರಸಿಂಹಮೂರ್ತಿಗೆ ಮತ ಚಲಾಯಿಸಿದ್ದು, ಇವರ ಸದಸ್ಯತ್ವ ಅನರ್ಹಗೊಳಿಸುವಂತೆ ಜಿಲ್ಲಾಧಿಕಾರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ದೂರು ನೀಡಿದ್ದರು. ಇದರ ವಿಚಾರಣಾ ತೀರ್ಪು ಬುಧವಾರ ಪ್ರಕಟೆಗೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ತಡೆ ನೀಡುವಂತೆ ಜೆಡಿಎಸ್ ಹೈ ಕೋರ್ಟ್ ಮೊರೆ ಹೋಗಿತ್ತು. ವಿಚಾರಣೆಯನ್ನು ಕೈಗೆತ್ತಿಕೊಂಡ ಹೈ ಕೋರ್ಟ್, ಜಿಲ್ಲಾಧಿಕಾರಿ ಅವರ ತೀರ್ಪಿನ ನಂತರ ನಿರ್ಧಾರ ಮಾಡಲಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಸದಸ್ಯರ ಗೌಪ್ಯ ಮತದಾನಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ನಾಲ್ವರು ಸದಸ್ಯರು ಮತದಾನ ಮಾಡಿರುವ ಮತ ಪತ್ರಗಳನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.
ಪಕ್ಷದ ಸದಸ್ಯರು ಈ ಬಾರಿಯೂ ಬೇಲಿ ಹಾರಬಾರದು ಎನ್ನುವ ಕಾರಣಕ್ಕೆ ಜೆಡಿಎಸ್ ಎಲ್ಲ ಸದಸ್ಯರಿಗೆ ವಿಪ್ ಜಾರಿ ಮಾಡಿತ್ತು. ಇದರ ಹೊರತಾಗಿಯೂ ಸದಸ್ಯೆ ನಾಗರತ್ನಮ್ಮ ಸಮಯಕ್ಕಿಂತ 45 ನಿಮಿಷ ತಡವಾಗಿ ಬಂದರು. ಈ ವೇಳೆ ಚುನಾವಣಾಧಿಕಾರಿ ಪ್ರವೇಶ ನಿರಾಕರಿಸಿದರು. ಶಾಸಕ ಎಚ್.ಸಿ.ಬಾಲಕೃಷ್ಣ ಮತ ಚಲಾಯಿಸಿದರು. ಚುನಾವಣೆ ನಡೆಯುತ್ತಿದ್ದರೂ ವಾಜಿ ಶಾಸಕ ಎ.ಮಂಜುನಾಥ್ ವಾಗಡಿಯತ್ತ ಸುಳಿಯಲಿಲ್ಲ.
ಉಪಾಧ್ಯಕ್ಷ ರಿಯಾಜ್, ಸ್ಥಾಯಿಸಮಿತಿ ವಾಜಿ ಅಧ್ಯಕ್ಷ ಶಿವಕುವಾರು, ಸದಸ್ಯರಾದ ಅಶ್ವಥ್, ರಮ್ಯಾ ನರಸಿಂಹಮೂರ್ತಿ, ರಾಮಣ್ಣ, ಹೇಮಲತಾ, ರಂಗಹನುಮಯ್ಯ, ಮಮತಾ ಗುರುಸ್ವಾಮಿ, ಆಶಾ, ವಿಜಯ ರೂಪೇಶ್, ಕಲ್ಕೆರೆ ಶಿವಣ್ಣ, ಶೈಲಜಾ, ಆಚಾರಿ ಮಂಜುನಾಥ್, ಪುರಸಭೆ ಆಶ್ರಯ ಕಮಿಟಿ ಸದಸ್ಯ ವೆಂಕಟೇಶ್ ಇದ್ದರು.