ಕುಂದೂರು ಗುರುಭವನದಲ್ಲಿ ನಾಡ ಕಚೇರಿ ಪ್ರಾರಂಭ

svl 1
Published on

ಸಾಸ್ವೆಹಳ್ಳಿ: ಹೊನ್ನಾಳಿ ತಾಲೂಕು ಕುಂದೂರು ಗ್ರಾಮದ ಗುರುಭವನದ ಕಟ್ಟಡದಲ್ಲಿ ಸೋಮವಾರ ಕಂದಾಯ ಇಲಾಖೆಯ ನಾಡ ಕಚೇರಿ ಸೇವೆಯನ್ನು ಪ್ರಾರಂಭಿಸಲಾಗಿದೆ.

ಎಂಟು ವಸತಿ ಸಮುಚ್ಚಯ ಒಳಗೊಂಡಿದ್ದ ಗ್ರಾಮದ ಗುರುಭವನ ಕಟ್ಟಡವನ್ನು ನಾಡಕಚೇರಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿ ಆದೇಶಿಸಿದ ಹಿನ್ನೆಲೆಯಲ್ಲಿ ಹೊನ್ನಾಳಿ ಉಪ ವಿಭಾಗಾಧಿಕಾರಿ ವಿ. ಅಭಿಷೇಕ್, ತಹಸೀಲ್ದಾರ್ ಪಟ್ಟರಾಜಗೌಡ ಟೇಪ್ ಕತ್ತರಿಸುವ ಮೂಲಕ ಕಚೇರಿ ಪ್ರಾರಂಭಗೊಳಿಸಿದರು.

ಉಪ ತಹಸೀಲ್ದಾರ್ ಮಂಜುನಾಥ್, ರಾಜಸ್ವ ನಿರೀಕ್ಷಕ ಬಸವರಾಜ್, ಗ್ರಾಪಂ ಕಾರ್ಯದರ್ಶಿ ಬಿ.ಜಿ ವೀರೇಂದ್ರ, ಸಾಮಾಜಿಕ ಕಾರ್ಯಕರ್ತ ಬಿ. ಪ್ರಸನ್ನಕುಮಾರ್, ಹೊನ್ನಾಳಿ ಕೃಷಿಕ ಸಮಾಜದ ನಿರ್ದೇಶಕ ಶಿವಕುಮಾರ್, ಗ್ರಾಮಸ್ಥರಾದ ಸಿ.ಕೆ ಶೇಖರಪ್ಪ, ಕೆ.ಜಿ ಜಯಣ್ಣ, ಬಿ.ಜಿ.ಶಿವಕುಮಾರ್, ಉಮಾಪತಿ, ನೆಲಹೊನ್ನೆ ದೇವರಾಜ್, ಕೆ.ತಿಪ್ಪೇಶ್, ಕೆಂಗಲಹಳ್ಳಿ ಪ್ರಭಾಕರ್, ಕಸಾಪ ಬಸವರಾಜು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಪಂ ಸದಸ್ಯರು ಇದ್ದರು.

ನಾಡ ಕಚೇರಿಯು ಸ್ವಂತ ಕಟ್ಟಡವಿಲ್ಲದೆ ಆಂಜನೇಯ ಸ್ವಾಮಿ ಸಮುದಾಯ ಭವನದ ಕಟ್ಟಡದಲ್ಲಿ ನಡೆಯುತ್ತಿತ್ತು. ಲಕ್ಷಾಂತರ ರೂ. ಹಣದಲ್ಲಿ ನಿರ್ವಣಗೊಂಡ ಸುಸಜ್ಜಿತ ಕಟ್ಟಡ ಲೋಕಾರ್ಪಣೆಗೊಳ್ಳದೆ ನನೆಗುದಿಗೆ ಬಿದ್ದಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಬಿ. ಪ್ರಸನ್ನ ಕುಮಾರ್ ಜಿಲ್ಲಾಡಳಿತದ ಗಮನ ಸೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net