

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಳ್ಳತನ ಪ್ರಕರಣಕ್ಕೆಸಂಬಂಧಿಸಿದಂತೆದ ವಿಚಾರಣೆಗೆ ಕರೆ ತರುತ್ತಿದ್ದ ವೇಳೆಯಲ್ಲಿ ಪೊಲೀಸ್ ವಶದಲ್ಲಿ (ಕಸ್ಟೋಡಿಯಲ್) ಇದ್ದಾಗ ಮೃತಪಟ್ಟಿರುವ ಇಲ್ಲಿಗೆ ಸಮೀಪದ ಶರಣಸಿರಸಗಿ ಮಡ್ಡಿಯ ನಿವಾಸಿಯಾಗಿದ್ದ ಉದಯಕುಮಾರ ಪಾರ್ದಿ ಪ್ರಕರಣವ ತನಿಖೆಯನ್ನು ಸಿಐಡಿಯವರು ಆರಂಭಿಸಿದರು.
ಪೊಲೀಸರು ವಿರುದ್ದ ಆರೋಪ ಬಂದಿದ್ದರಿಂದ ಮುಂದಿನ ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸಲಾಗಿದೆ. ಅದರ ಬೆನ್ನಲ್ಲಿಯೇ ತನಿಖೆ ಶುರುವಿಟ್ಟಿದ್ದಾರೆ.
ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಶಿವಪ್ಪ ಹಾಗೂ ನಾಲ್ಕು ಜನ ಸಿಬ್ಭಂದಿ ವಿರುದ್ಧ ಪಾರ್ದಿ ಕುಟುಂಬದವರು ಕೊಲೆ ಕೇಸ್ ನೀಡಿದ್ದರಿಂದ ಪೊಲೀಸರ ವಿರುದ್ಧ ಆರೋಪ ಮಾಡಿರುವುದರಿಂದ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿಕೊಡಲು ನಗರ ಪೊಲೀಸ್ ಆಯುಕ್ತರಾದ ಆರ್.ಚೇತನ ಅವರು, ಪೊಲೀಸ್ ಮಹಾನಿರ್ದೇಶಕರಿಗೆ ಕೋರಿದ್ದರು. ಅದರಂತೆ ಸಿಐಡಿ ಮಹಾನಿರ್ದೇಶಕರಾದ ಎ.ಎಂ.ಸಲೀA ಅವರು ಕೇಸ್ ತನಿಖೆ ನಡೆಸಲು ಐಜಿಪಿ ಮಧುಕರ ಪವಾರ ಅವರಿಗೆ ಸೂಚಿಸಿದ್ದಾರೆ..
ಆ ಆದೇಶದಂತೆ ಸಿಐಡಿ ಡಿವೈಎಸ್ಪಿಯಾಗಿರುವ ಶಂಕರಗೌಡ ಪಾಟೀಲ್ ಅವರನ್ನು ತನಿಖಾಧಿಕಾರಿಯಾಗಿ ಎಸ್ಪಿ ವೆಂಕಟೇಶ ಅವರು ನಿಯೋಜಿಸಿದ್ದಾರೆ. ತನಖಾ ಅಧಿಕಾರಿಗಳು ಕೆಲವರ ಭೇಟಿ ಮಾಡಿ ಮಾಹಿತಿ ಕಲೆ ಹಾಕು ಮಾಡಲಾಗಿದೆ ಎಂರು ಮೂಲಗಳು ವಿಜಯವಾಣಿಗೆ ತಿಳಿಸಿವೆ.
ಎಫ್ ಎಸ್ ಎಲ್ ಮಾದರಿ ರವಾನೆ
ಕಸ್ಟೋಡಿಯಲ್ ಡೆತ್ ಆಗಿರುವ ಉದಯಕುಮಾರ ಶವವನ್ನು ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನ್ಯಾಯಾಧೀಶರು ಪಂಚನಾಮೆ ಮಾಡಿದರು. ಬಳಿಕ ಹಿರಿಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು.. ಮರಣೋತ್ತರ ಪರೀಕ್ಷೆ ಕಾಲಕ್ಕೆ ಸಂಗ್ರಹಿಸಿರುವ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಎಸ್‌ಎಲ್ ಪ್ರಯೋಗಕ್ಕೆ ರವಾನಿಸಲಾಗಿದೆ. ಎರಡು ವಾರದಲ್ಲಿ ವರದಿ ಬರುವ ಸಾಧ್ಯತೆ ಇದೆ. ವರದಿ ನಂತರ ತನಿಖೆ ತೀವ್ರಗೊಳ್ಳಲಿದೆ.