

ತುಮಕೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಆಹ್ವಾನ ಪತ್ರಿಕೆಗಿಂತ ತುಮಕೂರು ದಸರಾ ಉತ್ಸವ ಆಹ್ವಾನ ಪತ್ರಿಕೆ ದುಬಾರಿ ಎನಿಸುವಂತಿದೆ !!. 24 ಪುಟಗಳ ಆಹ್ವಾನ ಪತ್ರಿಕೆಗೆ ಅಂದಾಜು 160 ರೂ., ತಗುಲಿದ್ದು 500 ಆಹ್ವಾನ ಪತ್ರಿಕೆಯನ್ನು ಮೊದಲ ಹಂತದಲ್ಲಿ ಮುದ್ರಿಸಲಾಗಿದೆ.
ಬೆಂಗಳೂರಿನ ಗೂಗಲ್ ಎಂಟರ್ಪ್ರೆಸಸ್ ಆಹ್ವಾನ ಪತ್ರಿಕೆ ವಿನ್ಯಾಸ, ಮುದ್ರಣ ಮಾಡಿದೆ. ದಸರಾ ಉದ್ಘಾಟನೆ ಬಳಿಕ ಗುರುವಾರ ಮಧ್ಯಾಹ್ನ ತರಾತುರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ತುರ್ತು ಸುದ್ದಿಗೋಷ್ಠಿ ಕರೆದು ಆಹ್ವಾನ ಪತ್ರಿಕೆಗಳನ್ನು ಮಾಧ್ಯಮ ಮಂದಿಗೆ ವಿತರಿಸಲಾಯಿತು. ಗಣ್ಯರ ಹೊರತಾಗಿ ಯಾರಿಗೂ ಆಹ್ವಾನ ಪತ್ರವನ್ನು ಜಿಲ್ಲಾಡಳಿತ ತಲುಪಿಸಿಲ್ಲ. ಇನ್ನೂ ವಿವಿಧ ಸಮಿತಿಗಳ ಸದಸ್ಯರಿಗು ಆಹ್ವಾನ ಪತ್ರಿಕೆ ತಲುಪಿಲ್ಲ.