ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದ ಗ್ರೇಡ್​-2 ತಹಶೀಲ್ದಾರ್​

ACB
Published on

ರಾಯಚೂರು: ರೈತನಿಂದ ಲಂಚ ಪಡೆಯುವ ವೇಳೆಯೇ ಗ್ರೇಡ್-2 ತಹಶಿಲ್ದಾರ್ ಪರಶುರಾಮನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿರವಾರ ತಹಶಿಲ್ದಾರ ಕಚೇರಿ ಮೇಲೆ ಶನಿವಾರ ದಾಳಿ ನಡೆಸಿದ ಎಸಿಬಿ ತಂಡ, ತಹಶೀಲ್ದಾರ್​ ಪರಶುರಾಮ 4000 ರೂ. ಲಂಚ ಪಡೆಯುತ್ತಿದ್ದ ವೇಳೆಯೇ ಬಂಧಿಸಿದ್ದಾರೆ.ಭೂ ಹಿಡುವಳಿ ಸಂಬಂಧಿತ ಕೆಲಸಕ್ಕಾಗಿ ರೈತನಿಂದ ಲಂಚ ಕೇಳಿದ್ದ. ಈ ಬಗ್ಗೆ ರೈತ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಶಾಖಾಪುರ ಗ್ರಾಮದ ರೈತ ಬಂಡೇಶ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ರಾಯಚೂರು ಎಸಿಬಿ ಡಿವೈಎಸ್ ಪಿ ನೇತೃತ್ವದಲ್ಲಿ ನಡೆದ ದಾಳಿ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net