ಪತಿ ಶ್ರೀಮಂತನಲ್ಲ ಎಂದು ತನ್ನ ಸೌಂದರ್ಯವನ್ನೇ ಬಳಸಿ ದುಡ್ಡು ಮಾಡಲು ಹೊರಟಿದ್ದ ಪತ್ನಿ ಮಾಡಿದ್ದೇನು?

Honeytrap
Published on

ಜೈಪುರ: ಪತಿ ಶ್ರೀಮಂತನಲ್ಲ ಎಂದು ಮಹಿಳೆಯೊಬ್ಬಳು ಹಿಡಿದ ಹಾದಿಯನ್ನು ತಿಳಿದರೇ ನೀವು ನಿಜಕ್ಕೂ ಬೆಚ್ಚಿ ಬೀಳುತ್ತೀರಾ. ತನ್ನ ಸೌಂದರ್ಯವನ್ನೇ ಅಸ್ತ್ರವಾಗಿ ಬಳಸಿದ ಈಕೆ ಹಿಡಿದಿದ್ದು ಮಾತ್ರ ಅಡ್ಡದಾರಿ.

ಮೂರು ವರ್ಷಗಳ ಹಿಂದೆಯೇ ವಿಕ್ರಮ್​ ಸಿಂಗ್​ ಎಂಬುವರೊಂದಿಗೆ ಮದುವೆಯಾಗಿ ಇದ್ದಿದ್ದರಲ್ಲೇ ಸುಖ ಸಂಸಾರದಿಂದ ಇದ್ದ 25 ವರ್ಷದ ಈ ಮಹಿಳೆ ಗಂಡನ ಆದಾಯದಿಂದ ತೃಪ್ತಿಯಾಗದೇ ಗಂಡ ಶ್ರೀಮಂತನಿಲ್ಲ ಏನಾದರೂ ಮಾಡಿ ದುಡ್ಡು ಗಳಿಸಬೇಕೆಂಬ ಕೆಟ್ಟ ಆಲೋಚನೆ ಮಾಡುತ್ತಾಳೆ. ಇದಕ್ಕೆ ಈಕೆ ಕಂಡುಕೊಂಡ ಮಾರ್ಗ ಮಾತ್ರ ಆಕೆಯ ಜೀವನವನ್ನೇ ಕತ್ತಲೆಯ ಕೂಪಕ್ಕೆ ತಳ್ಳಿದೆ.

ತನ್ನ ಪತಿ ಕೆಲಸ ಮಾಡುವ ಮಾರ್ಬಲ್​ ಕಂಪನಿಯಲ್ಲೇ ಕೆಲಸಕ್ಕಿದ್ದ ಪತಿ ಸ್ನೇಹಿತ ಶೈತಾನ್​ ಸಿಂಗ್​ ಎಂಬುವವನ ಜತೆ ಸೇರಿ ಮಾರ್ಬಲ್​ ವ್ಯಾಪಾರಿಯ ಸಂಪರ್ಕ ಪಡೆಯುತ್ತಾಳೆ. ಇಬ್ಬರು ಪರಸ್ಪರ ಪರಿಚಯವಾಗಿ ಸ್ನೇಹಿತರೂ ಆಗುತ್ತಾರೆ. ಇದನ್ನೇ ಸುದಪಯೋಗಪಡಿಸಿಕೊಳ್ಳುವ ಈ ಮಹಿಳೆ ಆಕೆಯ ಜತೆ ಸಂಬಂಧ ಬೆಳೆಸಿ, ಅಶ್ಲೀಲ ವಿಡಿಯೋ ಮಾಡಿಕೊಂಡು, ಇದನ್ನೇ ತೋರಿಸಿ ಆಗ್ಗಾಗ್ಗೇ ಬ್ಲಾಕ್​ ಮೇಲ್​ ಮಾಡಿ ಈವರೆಗೆ 23 ಲಕ್ಷ ರೂ.ಗಳನ್ನು ಕಸಿದುಕೊಂಡಿರುತ್ತಾರೆ. ಇದರಿಂದ ಮಾರ್ಬಲ್ ವ್ಯಾಪಾರಿ ಸಾಕಷ್ಟು ಕಿರುಕುಳ ಅನುಭವಿಸಿದ್ದನು.

ಇನ್ನು ತನ್ನ ಬಳಿ ಹಣವಿಲ್ಲ ಎಂದು ಮನೆಬಿಟ್ಟು ತೆರಳಿದ್ದ. ಈತನ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದಾಗ ಈತನ ಪತ್ತೆ ಹಚ್ಚಲಾಯಿತು. ಆತ್ಮಹತ್ಯೆಗೆ ಶರಣಾಗಲು ತಾನು ಮನೆ ಬಿಟ್ಟಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ. ಇದರಿಂದ ಈ ಮಹಿಳೆಯ ಕೃತ್ಯ ಬಯಲಾಗಿದೆ. ಸದ್ಯ ಮಹಿಳೆ ಸೇರಿ ಮೂವರನ್ನು ಬಂಧಿಸಲಾಗಿದ್ದು, 23 ಲಕ್ಷ ರೂ.ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net