ರಸ್ತೆಯಲ್ಲಿದ್ದ ಹಣ ತಗೊಂಡವರಿಗೂ ಕ್ವಾರಂಟೈನ್! ಮಾರ್ಗ ಮಧ್ಯೆ ಕಂಡು ಬಂದಿದ್ದ ಸಾವಿರಾರು ರೂ. ನಗದು ಹಣ

Note Quarantine
Published on

ಸವದತ್ತಿ (ಬೆಳಗಾವಿ): ರಸ್ತೆ ಮೇಲೆ ಬಿದ್ದ 200ರ ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳಲು ಜನತೆ ಮುಗಿಬಿದ್ದ ಸನ್ನಿವೇಶ ತಾಲೂಕಿನ ಹೂಲಿಕಟ್ಟಿ ಗ್ರಾಮದ ಬಸ್ ನಿಲ್ದಾಣ ಸಮೀಪದ ಪೆಟ್ರೋಲ್ ಬಂಕ್ ಹತ್ತಿರ ಶನಿವಾರ ಬೆಳಗ್ಗೆ ಕಂಡುಬಂದಿದೆ.

ರಾತ್ರಿ ಯಾರೋ ಉದ್ದೇಶಪೂರ್ವಕವಾಗಿ ರಸ್ತೆ ಮೇಲೆ ಹಣ ಎಸೆದು ಹೋಗಿರಬಹುದೆಂದು ಅಂದಾಜಿಸಲಾಗಿದೆ. ಮೂವರು ವ್ಯಕ್ತಿಗಳು ತಲಾ 2200, 2600, 1800 ರೂ. ಆಯ್ದುಕೊಂಡಿದ್ದಾರೆ. ಅಂದಾಜು 8 ಸಾವಿರ ರೂ. ರಸ್ತೆಯಲ್ಲಿ ಬಿದ್ದಿದ್ದವು ಎನ್ನಲಾಗಿದ್ದು, ಉಳಿದ ಹಣ ತೆಗೆದುಕೊಂಡವರ ಬಗ್ಗೆ ಇನ್ನೂ ಮಾಹಿತಿ ಲಭಿಸಿಲ್ಲ.

ಕೋವಿಡ್-19ರ ಭೀತಿಯಿಂದಾಗಿ ಮೂವರಿಂದಲೂ ಹಣ ವಶಪಡಿಸಿಕೊಂಡು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಮಹೇಶ ಚಿತ್ತರಗಿ ತಿಳಿಸಿದ್ದಾರೆ. ಘಟನೆ ಕುರಿತು ಗ್ರಾಮಸ್ಥರು ದೂರು ನೀಡದ್ದರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net