More

    ದೇಶದ ಒಟ್ಟು ಕರೊನಾ ಸೋಂಕಿತರ ಪೈಕಿ 4 ಸಾವಿರ ಪ್ರಕರಣಗಳಿಗೆ ತಬ್ಲಿಘಿ ನಂಟು!

    ನವದೆಹಲಿ: ದೇಶದಲ್ಲಿ ಈವರೆಗೆ ಪತ್ತೆಯಾಗಿರುವ 14,800 ಕರೊನಾ ಸೋಂಕು ಪ್ರಕರಣಗಳಲ್ಲಿ 4,291 ಪ್ರಕರಣಗಳಿಗೆ ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಘಿ ಜಮಾತ್‌ನ ಸಭೆಯೇ ಕಾರಣ. ಕೇಂದ್ರ ಆರೋಗ್ಯ ಸಚಿವಾಲಯವೇ ಈ ವಿಷಯವನ್ನು ಶನಿವಾರ ಸ್ಪಷ್ಟಪಡಿಸಿದೆ.

    ಕೇಂದ್ರಾಡಳಿತ ಪ್ರದೇಶಗಳೂ ಸೇರಿ ಒಟ್ಟು 23 ರಾಜ್ಯಗಳಿಂದ ಈ 4,291 ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಬಹುತೇಕ ಪರಕರಣಗಳು ತಮಿಳುನಾಡು, ತೆಲಂಗಾಣ, ದೆಹಲಿ, ಉತ್ತರಪ್ರದೇಶ ಹಾಗೂ ಆಂಧ್ರಪ್ರದೇಶದಿಂದ ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.

    ಅರುಣಾಚಲಪ್ರದೇಶದಿಂದ ವರದಿಯಾಗಿರುವ ಒಂದೇ ಸೋಂಕು ಪ್ರಕರಣ ಕೂಡ ತಬ್ಲಿಘಿಗೆ ಸಂಬಂಧಪಟ್ಟಿದ್ದು ಎಂಬುದು ಅಚ್ಚರಿಯಾದರೂ ಸತ್ಯ. ಅಸ್ಸಾಂನ 35 ಪ್ರಕರಣಗಳಲ್ಲಿ 32, ಅಂಡಮಾನ್‌ನ 12ರಲ್ಲಿ 10 ಪ್ರಕರಣಗಳು ತಬ್ಲಿಘಿಗೆ ಸಂಬಂಧಿಸಿದವು!

    ಈ ನಡುವೆ, ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 15 ಸಾವಿರದ ಗಡಿ ಸಮೀಪಿಸುತ್ತಿದ್ದು, ಮೃತರ ಸಂಖ್ಯೆ 500ರ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 571 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 14,800ಕ್ಕೆ ಏರಿಕೆಯಾಗಿದೆ. ಹೊಸದಾಗಿ 21 ಸಾವುಗಳು ವರದಿಯಾಗಿದ್ದು, ಮೃತರ ಸಂಖ್ಯೆ 500ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಮೃತರ ಸಂಖ್ಯೆ 201ಕ್ಕೇರಿದ್ದು, 3,300ಕ್ಕೂ ಹೆಚ್ಚು ಸೋಂಕು ಪ್ರಕರಣಗಳಿವೆ. ದೆಹಲಿ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ತಲಾ 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ದೇಶಾದ್ಯಂತ ಈವರೆಗೆ 2,168 ಜನರು ಗುಣಮುಖರಾಗಿದ್ದು, 12,132 ಸಕ್ರಿಯ ಪ್ರಕರಣಗಳಿವೆ. ದೆಹಲಿಯ ಜಹಾಂಗೀರ್ ಪುರಿಯಲ್ಲಿ ಒಂದೇ ಕುಟುಂಬದ 26 ಸದಸ್ಯರಿಗೆ ಕರೊನಾ ಸೋಂಕು ತಗುಲಿದೆ.

    ಭಾರತದಲ್ಲಿ ಕರೊನಾ ಸೋಂಕಿತರ ಮರಣ ಪ್ರಮಾಣ ಶೇ.3.3 ಇದೆ. ಶೇ.14.4ರಷ್ಟು 45 ವರ್ಷಕ್ಕಿಂತ ಕೆಳಗಿನವರು ಸಾವನ್ನಪ್ಪಿದ್ದು, ಶೇ.10.3ರಷ್ಟು ಜನರು 45 ರಿಂದ 60 ವರ್ಷದವರಾಗಿದ್ದಾರೆ. ಶೇ.33.1ರಷ್ಟು ಜನರು 60 ರಿಂದ 75 ವರ್ಷದವರು. ಶೇ. 42.2ರಷ್ಟು ಜನರು 75 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಲವ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಒಟ್ಟು ಸಾವುಗಳಲ್ಲಿ ಶೇ.75.3ರಷ್ಟು ಜನರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಮೃತಪಟ್ಟ ಶೇ. 83ರಷ್ಟು ಜನರಿಗೆ ಕರೊನಾ ಜತೆಗೆ ಇತರ ಆರೋಗ್ಯ ಸಮಸ್ಯೆಗಳಿದ್ದವು. ವಯಸ್ಸಾದ ಹಾಗೂ ಧೀರ್ಘಕಾಲಿಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕರೊನಾ ತೀವ್ರತೆ ಹೆಚ್ಚು ತಟ್ಟುತ್ತಿದೆ. (ಏಜೆನ್ಸೀಸ್​)

    ರಾಷ್ಟ್ರದಲ್ಲಿ ಕರೊನಾದಿಂದ ಮೃತಪಟ್ಟವರಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದವರೇ ಹೆಚ್ಚು: ಆರೋಗ್ಯ ಸಚಿವಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts