ರಾಜ್ಯದಲ್ಲಿಂದು ಕರೊನಾ ಸ್ಪೋಟ: 19 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ, ದಾಖಲೆ ಬರೆದ ಬೆಂಗಳೂರು

andhra pradesh corona
Published on

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕರೊನಾ ವೈರಸ್​ ಆರ್ಭಟ ಮುಂದುವರಿದಿದೆ. ಕಳೆದ 24ಗಂಟೆಯಲ್ಲಿ 1694 ಹೊಸ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ ಇಂದು ಒಂದೇ ದಿನ 994 ಮಂದಿಯಲ್ಲಿ ಕೊವಿಡ್​-19 ದೃಢಪಡುವ ಮೂಲಕ ರಾಜಧಾನಿ ಕರೊನಾ ಹಾಟ್​ಸ್ಪಾಟ್​ ಆಗಿದೆ.

ಕಳೆದ 24ಗಂಟೆಯಲ್ಲಿ ಕರೊನಾ ಸೋಂಕಿನಿಂದ 21 ಮಂದಿ ಸಾವನ್ನಪ್ಪಿದ್ದು, 471 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.

ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 19,710ಕ್ಕೆ ಏರಿದ್ದು, ಡಿಸ್​ಚಾರ್ಜ್​ ಆದವರು ಒಟ್ಟು 8805 ಜನರು. ಮೃತಪಟ್ಟವರು 293 ಜನರು ಹಾಗೂ ಒಟ್ಟು ಸಕ್ರಿಯ ಪ್ರಕರಣಗಳು 10608 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net