More

    ಮೂರು ದಿನಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದು ಹೈರಾಣದ ನಿವೃತ್ತ ಎಸ್ಐ ಸಾವು

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲೇ ಪೊಲೀಸರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬುದು ಅಕ್ಷರಶಃ ಸತ್ಯ. ಕಳೆದ ಮೂರು ದಿನಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದು ಹೈರಾಣದ ನಿವೃತ್ತ ಸಬ್ ಇನ್​ಪೆಕ್ಟರ್ ನಿನ್ನೆ(ಗುರುವಾರ) ರಾತ್ರಿಯೇ ಅಸುನೀಗಿದ್ದಾರೆ.

    ಕೋರಮಂಗಲದ ನಿವೃತ್ತ ಪಿಎಸ್​ಐ ಪಂಚಾಕ್ಷರಿ(67) ಮೃತರು. ಮೂರು ದಿನಗಳ ಹಿಂದೆ ಜ್ವರ ಬಂದ ಹಿನ್ನೆಲೆಯಲ್ಲಿ ಪಂಚಾಕ್ಷರಿ ಅವರಿಗೆ ಚಿಕಿತ್ಸೆ ಕೊಡಿಸಲು ಅವರ ಕುಟುಂಬ ಸದಸ್ಯರು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಜ್ವರ ಇದ್ದ ಕಾರಣಕ್ಕೆ ಕೋವಿಡ್​ ಭಯದಿಂದ ಚಿಕಿತ್ಸೆ ನೀಡಿಲ್ಲ. ಅಲ್ಲಿಂದ ವಿಲ್ಸನ್​ ಗಾರ್ಡನ್​ನಲ್ಲಿರುವ ಮತ್ತೊಂದು ಆಸ್ಪತ್ರೆಗೆ ಬಂದಾಗಲೂ ಚಿಕಿತ್ಸೆ ನೀಡಿಲ್ಲ. ಮತ್ತೆರೆಡು ಆಸ್ಪತ್ರೆಗೆ ಹೋದಾಗಲೂ ಕೋವಿಡ್​ ಪರೀಕ್ಷೆ ಮಾಡಿಸಬೇಕು. ಇಲ್ಲಿ ವೆಂಟಿಲೇಟರ್​ ಸೌಲಭ್ಯವಿಲ್ಲ ಎಂದು ಸಬೂಬು ಹೇಳಿ ಕಳುಹಿಸಿದ್ದಾರೆ. ಇದನ್ನೂ ಓದಿರಿ ಇಡೀ ರಾಜ್ಯ ಮತ್ತೆ ಸ್ತಬ್ಧ! ವೀಕೆಂಡ್​ ಲಾಕ್​ಡೌನ್​ಗೆ ಕ್ಷಣಗಣನೆ 

    ಕೊನೆಗೆ ಪಂಚಾಕ್ಷರಿ ಅವರನ್ನು ಕುಟುಂಬಸ್ಥರು ರಾಜೀವ್​ ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲೂ ಮೂರು ಗಂಟೆ ಕಾಯಿಸಿದ್ದಾರೆ. ಬೆಡ್​ ಖಾಲಿ ಇಲ್ಲವೆಂದು ಚಿಕಿತ್ಸೆಗೆ ನಕಾರ ಮಾಡಿದ ವೈದ್ಯರು, ಕೈ ಚೆಲ್ಲಿದ್ದಾರೆ. ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಯೂ ಬೆಡ್​ ಖಾಲಿ ಇಲ್ಲವೆಂದು ಹೇಳಿದ್ದಾರೆ. ಕೊನೆಗೆ ಚಿಕಿತ್ಸೆ ಸಿಗದೆ ಖಾಸಗಿ ಕ್ಲಿನಿಕ್​ನಲ್ಲಿ ಅಸುನೀಗಿದ್ದಾರೆ. ಆಸ್ಪತ್ರೆಗಳ ವಿರುದ್ಧ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೂ ಟ್ರೀಟ್ಮೆಂಟ್ ಸಿಗ್ತಿಲ್ಲ ಬೆಂಗಳೂರಿನಲ್ಲಿ ಟ್ರೀಟ್ಮೆಂಟ್ ಸಿಗ್ತಿಲ್ಲ. ಇನ್ನು ನಿವೃತ್ತ ಪೊಲೀಸರ ಕಥೆ ಹೇಳತೀರದಾಗಿದೆ.

    ಜಾಂಡೀಸ್​ನಿಂದ ಬಳಲುತ್ತಿದ್ದ ವಿಜಯನಗರ ಪೊಲೀಸ್​ ಠಾಣೆಯ ಮುಖ್ಯಪೇದೆ ರವಿಕುಮಾರ್​(49) ಚಿಕಿತ್ಸೆಗಾಗಿ ನಿನ್ನೆ (ಗುರವಾರ) ರಾತ್ರಿಯಿಡೀ ಆಸ್ಪತ್ರೆಗಳಿಗೆ ಅಲೆದೆರೂ ಕರೊನಾ ಭೀತಿ ಹಿನ್ನೆಲೆಯಲ್ಲಿ ಅವರನ್ನು ಯಾವೊಂದು ಆಸ್ಪತ್ರೆಯಲ್ಲೂ ದಾಖಲಿಸಿಕೊಂಡಿಲ್ಲ. ತೀವ್ರ ಅಸ್ವಸ್ಥರಾಗಿದ್ದ ರವಿಕುಮಾರ್​ ಬೆಳಗ್ಗೆ 8ರ ಸುಮಾರಿನಲ್ಲಿ ಕೊನೆಯುಸಿರೆಳೆದರು.

    ಈ ಎರಡೂ ಪ್ರಕರಣಗಳೂ ಪೊಲೀಸ್​ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಇನ್ನಾದರೂ ಸರ್ಕಾರ ಆರಕ್ಷಕರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ.

    ಬೆಂಗಳೂರಲ್ಲಿ ಪೊಲೀಸರಿಗೂ ಸಿಕ್ತಿಲ್ಲ ಟ್ರೀಟ್ಮೆಂಟ್! ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮುಖ್ಯಪೇದೆ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts