ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ಪೀಡಿತರ ಸಂಖ್ಯೆ ಸಾವಿರದತ್ತ ದಾಪುಗಾಲು ಇಡುತ್ತಿದ್ದು, ಬುಧವಾರ ಹೊಸದಾಗಿ 34 ಪ್ರಕರಣಗಳು ದೃಢವಾಗಿದ್ದು, ಒಟ್ಟು ಸಂಚಿತ ಖಚಿತ ಪ್ರಕರಣಗಳ ಸಂಖ್ಯೆ 959ಕ್ಕೆ ಏರಿಕೆಯಾಗಿದೆ. ಇವುಗಳ ಪೈಕಿ 33 ಪ್ರಕರಣಗಳಲ್ಲಿ ರೋಗಿಗಳು ಮೃತಪಟ್ಟಿದ್ದಾರೆ.
ಇದಲ್ಲದೆ, ಒಂದು ಸಾವು ಕೋವಿಡ್ 19 ರ ಹೊರತಾದ ಕಾರಣಕ್ಕೆ ಸಂಭವಿಸಿದೆ. 451 ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೊಸ ಪ್ರಕರಣಗಳು ನಿನ್ನೆ ಸಂಜೆ 5ಗಂಟೆಯಿಂದ ಇಂದು ಸಂಜೆ 12 ಗಂಟೆಯವರೆಗೆ ದೃಢಪಟ್ಟಿರುವುದಾಗಿದೆ.
ಇಂದು ದೃಢಪಟ್ಟಿರುವ 34 ಪ್ರಕರಣಗಳ ಪೈಕಿ 12 ಪ್ರಕರಣ ಬೀದರ್ನಲ್ಲಿ, ಕಲಬುರಗಿಯಲ್ಲಿ 8, ಹಾಸನದಲ್ಲಿ 4 ಹಾಗೂ ಬೆಂಗಳೂರು ನಗರ, ವಿಜಯಪುರ, ಉತ್ತರ ಕನ್ನಡ ಮತ್ತು ದಾವಣಗೆರೆಯಲ್ಲಿ ತಲಾ ಎರಡು ಪ್ರಕರಣಗಳು ಹಾಗೂ ಬಳ್ಳಾರಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಉಳಿದ ವಿವರಗಳಿಗಾಗಿ ಪಟ್ಟಿಯನ್ನು ಗಮನಿಸಿ..