VIDEO| ಕರೊನಾ ಭೀತಿಗೆ ರಾಜ್ಯ ಲಾಕ್​ಡೌನ್​ ಆಗಿರು ಮಧ್ಯೆಯೇ ಮನಕಲಕುವ ಘಟನೆ: ಅನ್ನಕ್ಕಾಗಿ ಕಸದರಾಶಿ ಹುಡುಕಾಡಿದ ವೃದ್ಧ

Gadag Oldman
Published on

ಗದಗ: ಕರೊನಾ ವೈರಸ್​ ಭೀತಿಯಿಂದ ಇಡೀ ದೇಶದಲ್ಲಿ ಸೃಷ್ಟಿಯಾಗಿರುವ ಭೀಕರತೆ ಯಾವ ಮಟ್ಟಿಗೆ ಇದೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದ್ದು, ಕಣ್ಣಂಚಲ್ಲಿ ನೀರು ಬರುವಂತಿದೆ.

ಇಡೀ ದೇಶಕ್ಕೆ ದೇಶವೇ ಸ್ತಬ್ಧವಾಗಿದೆ. ಜನರು ಮನೆಯಲ್ಲೇ ಲಾಕ್​ ಆಗಿರುವುದರಿಂದ ದಿನನಿತ್ಯದ ಚಟುವಟಿಕೆಗಳು ಬಂದ್​ ಆಗಿದೆ. ಇದರ ನಡುವೆ ಹಸಿವಿನಿಂದ ಪರದಾಡುತ್ತಿದ್ದ ಮಾನಸಿಕ ಅಸ್ವಸ್ಥನೊಬ್ಬ ಹಸಿವು ನೀಗಿಸಿಕೊಳ್ಳಲು ಕಸದಲ್ಲಿ ಏನಾದರೂ ಸಿಗಲಿದೆಯೇ ಎಂದು ಹುಡುಕಾಡಿದ ಮನಕಲಕುವ ಘಟನೆ ಗದಗದ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಪುರಸಭೆ ಇಲಾಖೆ ಹಾಕಿದ್ದ ಕಸದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿದ್ದ ವಯೋವೃದ್ಧನನ್ನು ಕಂಡು ಸ್ಥಳೀಯರು ಉಪಹಾರ ಹಾಗೂ ನೀರು ನೀಡಿ ಮಾನವೀಯತೆ ಮೆರೆದರು.

ಸದ್ಯ ಭಾರತದಲ್ಲಿ ಕೋವಿಡ್​-19 ತಗುಲಿರುವ ಸಂಖ್ಯೆ 511ಕ್ಕೇರಿದ್ದು, 12 ಹೊಸ ಪ್ರಕರಣಗಳು ವರದಿಯಾಗಿವೆ. ಈವರೆಗೂ ಒಟ್ಟು 11 ಮಂದಿ ಬಲಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net