ಕರೊನಾ ಭೀತಿಯಿಂದ ತರಾತುರಿಯಲ್ಲಿ ಊರಿಗೆ ತೆರಳುತ್ತಿದ್ದಾಗ ಕಾರು ಅಪಘಾತ: ಮೂವರ ದಾರುಣ ಸಾವು

Car Accident
Published on

ಬಾಗಲಕೋಟೆ: ಕರೊನಾ ಭೀತಿ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬೆಂಗಳೂರಿನಿಂದ ಬೀದರ್​ಗೆ ಹೊರಟಿದ್ದಾಗ ಮಾರ್ಗಮಧ್ಯೆ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಇಂದು ನಡೆದಿದೆ.

ಸುವರ್ಣ(40), ಬಸವಣ್ಣೆಪ್ಪ(70) ಹಾಗೂ ಸವಿತಾ(20) ಮೃತ ದುರ್ದೈವಿಗಳು. ಟ್ರಾಫಿಕ್​ ಕಾರಣ ಇಳಕಲ್ ಮಾರ್ಗವಾಗಿ ಬೀದರ್​ಗೆ ಹೊರಟಿದ್ದರು. ಹಿರೇಕೊಡಗಲಿ ಗ್ರಾಮದ ಬಳಿಯಿರುವ ರಸ್ತೆ ತಿರುವು ಗೊತ್ತಾಗದೆ ಕಲ್ಲು ಬಂಡೆಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಇಳಕಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಸಾವಿಗಿಡಾಗಿದ್ದು, ಮತ್ತೆ ಇಳಕಲ್​​ನಿಂದ ಬಾಗಲಕೋಟೆ ಆಸ್ಪತ್ರೆಗೆ ಹೋಗುವ ವೇಳೆ ಇನ್ನೊಬ್ಬರು ಮೃತರಾಗಿದ್ದಾರೆ. ಒಟ್ಟು ಕಾರಿನಲ್ಲಿ ಆರು ಮಂದಿಯಿದ್ದರು. ಉಳಿದ ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಲಾಗಿದೆ. ಎಲ್ಲರೂ ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನ ಕಟಕಚಿಂಚೂಳಿ ಗ್ರಾಮದವರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಇಳಕಲ್ ಗ್ರಾಮೀಣ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net