

ಕೋಲಾರ: ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಲಾಕ್ಡೌನ್ ಹೇರಲಾಗಿದ್ದು, ಸುರಕ್ಷಿತವಾಗಿರಲು ಎಲ್ಲರೂ ಮನೆಯಲ್ಲೇ ಉಳಿಯಬೇಕಾಗಿದೆ. ಇದು ಕೆವರಿಗೆ ಶಾಪವಾಗಿದ್ದರೆ, ಕೆಲವರಿಗೆ ವರವಾಗಿದೆ.
ಹೌದು, ರಾಜಕೀಯ ಜಂಜಾಟಗಳಿಂದ ಕುಟುಂಬದೊಂದಿಗೆ ಸಮಯ ಕಳೆಯಲು ಬಹುತೇಕರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಲಾಕ್ಡೌನ್ ಆ ಅವಕಾಶವನ್ನು ಒದಗಿಸಿಕೊಟ್ಟಿದ್ದು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ತಮ್ಮ ಮೊಮ್ಮಗನ ಜತೆ ಆಟವಾಡಿ ಖುಷಿಪಟ್ಟಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ನಲ್ಲಿ ಉಳಿದಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಮೊಮ್ಮಗವಿನ ಜತೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ.