ಒಂದೇ ದಿನ 9 ಸೋಂಕಿತ ಪ್ರಕರಣ: ಓರ್ವ ಗರ್ಭಿಣಿ ಸೇರಿದಂತೆ ಸೋಂಕಿತರ ಸಂಖ್ಯೆ 110ಕ್ಕೆ ಏರಿಕೆ

Corona
Published on

ಕರ್ನಾಟಕದಲ್ಲಿ ಕರೊನಾ ವೈರಸ್‌ ಸೋಂಕಿತರ ಸಂಖ್ಯೆ ಇಂದು ಒಂದೇ ದಿನ ಒಂಬತ್ತರಷ್ಟು ಹೆಚ್ಚಾಗಿದೆ. ಓರ್ವ ಗರ್ಭಿಣಿ ಸೇರಿದಂತೆ ಸೋಂಕಿತರ ಸಂಖ್ಯೆ 110ಕ್ಕೆ ಏರಿದೆ.

ಇದುವರೆಗೆ ಮೂವರು ಮೃತಪಟ್ಟಿದ್ದು, 9 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನಲ್ಲಿ 48, ಮೈಸೂರಿನಲ್ಲಿ 19, ಚಿಕ್ಕಬಳ್ಳಾಪುರ ಹಾಗೂ ದಕ್ಷಿಣ ಕನ್ನಡ ತಲಾ 9, ಉತ್ತರ ಕನ್ನಡ 8; ಕಲಬುರ್ಗಿ 4; ದಾವಣಗೆರೆ, ಉಡುಪಿ ಹಾಗೂ ಬಳ್ಳಾರಿಯಲ್ಲಿ ತಲಾ 3, ತುಮಕೂರಿನಲ್ಲಿ 2, ಕೊಡಗು ಮತ್ತು ಧಾರವಾಡದಲ್ಲಿ ತಲಾ ಒಬ್ಬರು ಸೋಂಕಿನಿಂದ ಬಳಲುತ್ತಿದ್ದಾರೆ. ಈ ಪೈಕಿ ಇಲ್ಲಿಯವರೆಗೆ ಬೆಂಗಳೂರು, ಕಲಬುರಗಿ ಹಾಗೂ ತುಮಕೂರಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 8 ಹಾಗೂ ಕಲಬುರ್ಗಿಯಲ್ಲಿ ಓರ್ವ ವ್ಯಕ್ತಿ ಗುಣಮುಖರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net