More

    VIDEO| ಕರೊನಾದಿಂದಾಗಿ ಪೆಂಗ್ವಿನ್​-ತಿಮಿಂಗಿಲಗಳ ಭೇಟಿ: ಮೌನ ಸಂಭಾಷಣೆಯಲ್ಲೇ ಉಭಯ ಕುಶಲೋಪರಿ!

    ನ್ಯೂಯಾರ್ಕ್​: ಲಾಕ್​ಡೌನ್​ ಹಿನ್ನೆಲೆಯಲ್ಲಿ ಅಮೆರಿಕಾದ ಚಿಕಾಗೋ ಅಕ್ವೇರಿಯಂ ಅನ್ನು ಸಾರ್ವಜನಿಕ ಭೇಟಿಗೆ ರದ್ದು ಮಾಡಲಾಗಿದೆ. ಈ ಮಧ್ಯೆ ಪೆಂಗ್ವಿನ್ ಪಕ್ಷಿಗಳನ್ನು ಅಡ್ಡಾಡಲು ಅವಕಾಶ ನೀಡಿದ್ದು, ಸಿಕ್ಕಿದ್ದೇ ಚಾನ್ಸ್​ ಅಂದುಕೊಂಡು ಪೆಂಗ್ವಿನ್​ಗಳು ತನ್ನು ಉಸ್ತುವಾರಿಗಳನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿನಿಮಯ ಮಾಡಿಕೊಂಡಿವೆ.

    ಅಕ್ವೇರಿಯಂನಲ್ಲಿನ ಬೆಲುಗಾ ತಿಮಿಂಗಿಲಗಳ ಎದುರಿಗೆ ನಿಂತು ಪೆಂಗ್ವಿನ್​ ಒಂದು ಮೌನ ಸಂಭಾಷಣೆ ನಡೆಸಿದೆ. ಉಭಯ ಜೀವಿಗಳ ಮಧ್ಯೆ ಗಾಜಿನ ಪರದೆ ಅಡ್ಡಲಾಗಿದ್ದರೂ ಸಹ ಕಣ್ಣಲ್ಲೇ ಸಂವಹನ ನಡೆಸಿದಂತಿರುವ ಫೋಟೋ- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಮಂಗಳವಾರ ಶೆಡ್ಡ್​ ಅಕ್ವೇರಿಯಂ ಇದನ್ನು ಬಹಿರಂಗ ಪಡಿಸಿದೆ. ಕಳೆದ ವೀಕೆಂಡ್​ನಲ್ಲಿ ಅತ್ಯಂತ ವಯಸ್ಸಾದ ವೆಲ್ಲಿಂಗ್ಟನ್​ ಹೆಸರಿನ ಪೆಂಗ್ವಿನ್​ ತಿಮಿಂಗಿಲವನ್ನು ಭೇಟಿ ಮಾಡಿದೆ ಎಂದು ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದೆ. ಈವರೆಗೂ ವಿಡಿಯೋ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಅಲ್ಲದೆ, ಸಾಕಷ್ಟು ಮೆಚ್ಚುಗೆಯು ಹರಿದುಬರುತ್ತಿವೆ.

    ಪೆಂಗ್ವಿನ್​ಗಳನ್ನು ಏಕೆ ಅಡ್ಡಾಡಲು ಬಿಟ್ಟಿರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಶೆಡ್ಡ್​​ ಅಕ್ವೇರಿಯಂ ಸಿಬ್ಬಂದಿ, ಅತಿಥಿಗಳಿಲ್ಲದೆ ಬಣಗುಡುತ್ತಿರುವ ಅಕ್ವೇರಿಯಂನಲ್ಲಿನ ಪ್ರಾಣಿಗಳನ್ನು ಸಕ್ರೀಯವಾಗಿಡಲು ಈ ಸೃಜನಾತ್ಮಕ ಚಟುವಟಿಕೆಯನ್ನು ಕೈಗೊಳ್ಳಾಗಿದೆ. ಪೆಂಗ್ವಿನ್​ಗಳನ್ನು ಅಡ್ಡಾಡಲು ಬಿಟ್ಟು, ಅವುಗಳಿಗೆ ಉತ್ತೇಜನ ನೀಡಿ, ಅವುಗಳಲ್ಲಿರುವ ವಿಶಿಷ್ಟತೆಯನ್ನು ತಿಳಿದುಕೊಳ್ಳಲು ಈ ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    Time for a polar field trip! 🐧🐳❄️ Penguins Tilly and Carmen explored the underwater viewing area of the Abbott…

    Shedd Aquarium ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮಾರ್ಚ್ 29, 2020

    1-2 ಲಕ್ಷ ಸಾವು ಖಚಿತ; ಎದುರಿಸಲು ಸಿದ್ಧರಾಗಿರಿ: ಅಮೆರಿಕನ್ನರಿಗೆ ವೈಟ್​ಹೌಸ್​ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts